ನ್ಯೂಸ್

'ಹೆಂಡತಿ ಸೀರೆ ಕದ್ದ' ಎಂದು ಆರೋಪಿಸಿ ನೆರೆಮನೆಯ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ

ನವದೆಹಲಿ: ತನ್ನ ಪತ್ನಿಯ ಸೀರೆ ಕದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬ ತನ್ನ ನೆರೆಮನೆಯ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಬಿಹಾರ ಮೂಲದ ಪಿಂಟು ಮತ್ತು ಉತ್ತರ ಪ್ರದೇಶದ ಅಜಯ್ (42) ಎನ್ನುವವರು ನಾಥುಪುರ ಗ್ರಾಮದ ಒಂದೇ ಬಾಡಿಗೆ ವಸತಿಗೃಹದಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ವಾಸಿಸುತ್ತಿದ್ದಾರೆ. ಅಜಯ್ ಕುಮಾರ್ ಪತ್ನಿ ರೀನಾ ತನ್ನ ಪತಿಗೆ ಗುರುಗ್ರಾಮ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ತಮ್ಮ ನೆರೆಯ ಪಿಂಟು ಕುಮಾರ್ (30) ತನ್ನ ಸೀರೆಯನ್ನು ಕದ್ದಿದ್ದಾನೆ ಹೇಳಿದ್ದಾಳೆ.

ರಾತ್ರಿ 8 ಗಂಟೆಯ ಸುಮಾರಿಗೆ ಪಿಂಟು ತನ್ನ ಕರ್ತವ್ಯದಿಂದ ಹಿಂತಿರುಗಿದಾಗ, ಅಜಯ್, ಪಿಂಟುನಿಗೆ ಅಡ್ಡಗಟ್ಟಿ ನನ್ನ ಪತ್ನಿಯ ಸೀರೆ ಕಳ್ಳತನ ಮಾಡಿದ್ದೀಯಾ ಎಂದು ಜಗಳ ಮಾಡಿದ್ದಾನೆ. ಆದರೆ ಪಿಂಟು ಈ ಆರೋಪಗಳನ್ನು ತಳ್ಳಿ ಹಾಕಿದ್ದಾನೆ. ನಂತರ ಇಬ್ಬರ ನಡುವೆ ವಾಗ್ವಾದ ನಡೆಯಿತು. ಜಗಳದ ಸಂದರ್ಭದಲ್ಲಿ ಅಜಯ್ ತನ್ನ ಕೊಠಡಿಯಿಂದ ಡಬಲ್ ಬ್ಯಾರಲ್ ಗನ್ ತೆಗೆದು ಪಿಂಟು ಅವರ ಹೊಟ್ಟೆಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಪಿಂಟು ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದೇವೆ ಅಲ್ಲಿ ಅವರು ಚಿಕಿತ್ಸೆಯಲ್ಲಿ ಸಾವನ್ನಪ್ಪಿದರು ಎಂದು ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಅಜಯ್ ವಿರುದ್ಧ ಸೆಕ್ಷನ್ 302 (ಕೊಲೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಮಂಗಳವಾರ ರಾತ್ರಿ ಡಿಎಲ್‌ಎಫ್ ಹಂತ 3 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.