ನ್ಯೂಸ್

WhatsApp​ ಗ್ರೂಪ್​ನಿಂದ ಹೊರ ಹಾಕಿದಕ್ಕೆ ಆಡ್ಮಿನ್​ಗೆ ಗುಂಡು ಹಾರಿಸಿದ ಕೊಂದ ವ್ಯಕ್ತಿ!

WhatsApp ಗ್ರೂಪ್​ನಿಂದ ಹೊರ ಹಾಕಿದ ಎಂಬ ಕಾರಣಕ್ಕೆ ವ್ಯಕ್ತಿಯೊರ್ವ ಆಡ್ಮಿನ್​ಗೆ ಗುಂಡು ಹಾರಿಸಿದ ಕೊಂದಿರುವ ಘಟನೆ ಇದೇ ಮಾ.7ರಂದು ಪಾಕಿಸ್ತಾನದ ಪೇಶಾವರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಫಖತ್ನುವಾರ್​ ಪ್ರದೇಶದ ನಿವಾಸಿ ಮುಷ್ತಾಕ್ ಅಹ್ಮದ್ ಮೃತ. ಈ ಕುರಿತು ಮೃತ ಮುಷ್ತಾಕ್ ಅಹ್ಮದ್ ಸಹೋದರ ಹುಮಾಯೂನ್ ಖಾನ್ ದೂರು ನೀಡಿದ್ದಾರೆ. ಆರೋಪಿ ಪರಾರಿಯಲ್ಲಿದ್ದು, ಶೋಧ ಕಾರ್ಯ ಆರಂಭವಾಗಿದೆ ಎಂದು ಅಲ್ಲಿನ ಸ್ಥಳೀಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ನಡೆದಿದ್ದೇನು..?

ಸಂತ್ರಸ್ತ ಮುಷ್ತಾಕ್ ಅಹ್ಮದ್ ವ್ಯಾಟ್ಸಪ್​ ಗ್ರೂಪ್‌ನ ನಿರ್ವಾಹಕರಾಗಿದ್ದರು. ಕೆಲವು ಭಿನ್ನಾಭಿಪ್ರಾಯಗಳ ನಂತರ ಅವರು ಅಶ್ಫಾಕ್ ಖಾನ್ ಅವರನ್ನು ಗುಂಪಿನಿಂದ ತೆಗೆದುಹಾಕಿದ್ದರು ಎನ್ನಲಾಗಿದೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಅವರನ್ನು ತೆಗೆದುಹಾಕಿದ್ದರಿಂದ ಕೋಪಗೊಂಡ ಅಶ್ಫಾಕ್ ಅಹ್ಮದ್ ಮೇಲೆ ಗುಂಡು ಹಾರಿಸಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ವರದಿಯಾಗಿದೆ.

ಮುಷ್ತಾಕ್ ಅಹ್ಮದ್ ಸಹೋದರ ಹುಮಾಯೂನ್ ಖಾನ್ ನೀಡಿದ ಸಂದರ್ಶನವೊಂದರಲ್ಲಿ ನನ್ನ ಕೊಲೆಯಾದ ಸಹೋದರ ಮುಷ್ತಾಕ್ ಮತ್ತು ಅಶ್ಫಾಕ್ ನಡುವೆ ವಾಟ್ಸಾಪ್ ಗುಂಪಿನಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬೆಳೆದು, ನನ್ನ ಸಹೋದರನನ್ನು ಗುಂಪಿನಿಂದ ತೆಗೆದುಹಾಕಲು ಒತ್ತಾಯಿಸಲಾಯಿತು. ಇದರಿಂದ ಕೋಪಗೊಂಡ ಅಶ್ಫಾಕ್ ನನ್ನ ಸಹೋದರನನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಿದ್ದಾನೆ.(ಏಜೆನ್ಸೀಸ್​)