ನ್ಯೂಸ್

ತಲೆ ಬೋಳಿಸಿಕೊಂಡು 91,300 ಕೂದಲಿನ ಎಳೆಗಳನ್ನು ಎಣಿಸಿದ ವ್ಯಕ್ತಿ; ನಿರುದ್ಯೋಗವೇ ಇದಕ್ಕೆ ಕಾರಣ ಎಂದ ನೆಟ್ಟಿಗರು| viral video

viral video | ನಮ್ಮ ಜನಗಳಿಗೆ ಮಾಡಲು ಸರಿಯಾದ ಉದ್ಯೋಗ ಇಲ್ಲ ಅಂದ್ರೆ ಅವರು ಮಾಡೋ ಕೆಲಸ ಅಂತಿಂತದ್ದಲ್ಲ. ಅದರಲ್ಲೂ ಕೈಯಲ್ಲಿ ಮೊಬೈಲ್​ ಇದ್ದರೆ ಸಾಕು, ತಾವು ಫೇಮಸ್​ ಆಗೋಕೆ ಮಾಡಬಾರದ್ದನ್ನೆಲ್ಲಾ ಮಾಡ್ತಾರೆ. ಅಂದಹಾಗೆ ಇಲ್ಲೊಬ್ಬ ವ್ಯಕ್ತಿ ತನ್ನ ತಲೆಯನ್ನ ಬೋಳಿಸಿಕೊಂಡು 91,300 ಕೂದಲಿನ ಎಳೆಗಳನ್ನು ಕೈಯಿಂದ ಎಣಿಸುತ್ತಿರುವ ವಿಡಿಯೋ ವೈರಲ್​ ಆಗಿದೆ.

ಈ ವ್ಯಕ್ತಿ ಪ್ರತಿಯೊಂದು ಕೂದಲಿನ ಎಳೆಗೂ ಒಂದು ಸಣ್ಣ ಕಲ್ಲನ್ನು ಬುಟ್ಟಿಗೆ ಹಾಕುತ್ತಾನೆ. ಅವನು ಪ್ರತಿದಿನ 10 ರಿಂದ 12 ಗಂಟೆಗಳ ಕಾಲ ಸತತವಾಗಿ ಹಲವು ದಿನಗಳವರೆಗೆ ಹೀಗೆ ಮಾಡುವ ಮೂಲಕ ತನ್ನ ತಲೆಯ ಮೇಲೆ 91,300 ಕೂದಲಿನ ಎಳೆಗಳಿವೆ ಎಂದು ಹೆಮ್ಮೆಯಿಂದ ಹೇಳಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಿತ್ರವಾದ ವಿಡಿಯೋವೊಂದು ಸಂಚಲನವನ್ನೇ ಸೃಷ್ಠಿ ಮಾಡಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ತಲೆಯನ್ನು ಸಂಪೂರ್ಣವಾಗಿ ಬೋಳಿಸಿಕೊಂಡು, ನಂತರ ತನ್ನ ತಲೆಯ ಮೇಲಿರುವ ಪ್ರತಿಯೊಂದು ಕೂದಲನ್ನು ಎಣಿಸಲು ಪ್ರಾರಂಭಿಸುತ್ತಾನೆ. ಈ ವಿಡಿಯೋವನ್ನು 'ಕಂಟ್ರಿ ಮ್ಯಾನ್' ಎಂಬ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿಡ್ಡು, ಎಲ್ಲೆಡೆ ವೈರಲ್​ ಆಗ್ತಿದೆ.

ಇನ್ನೂಈ ದಾಖಲೆಯನ್ನ ಆ ವ್ಯಕ್ತಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ಗೆ ಕಳುಹಿಸಿದ್ದು, ಎರಡೂ ಕಡೆಯಿಂದಲೂ ಇವನ ಈ ವಿನಂತಿಯನ್ನು ತಿರಸ್ಕರಿಸಲಾಗಿದೆ.

(ಏಜೆನ್ಸೀಸ್)

ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆಯದಿದ್ದರೂ ಸಹ ಇಂಟರ್ನೆಟ್​ನಲ್ಲಿ ಈ ವೀಡಿಯೊವನ್ನು ತುಂಬಾ ಜನರನ್ನ ಆಕರ್ಷಿಸಿದೆ. ಇದನ್ನು ಸೋಷಿಯಲ್​ ಮೀಡಿಯಾದಲ್ಲಿ ಈಗಾಗಲೇ ಸುಮಾರು 15 ಮಿಲಿಯನ್​ಗೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಇನ್ನೂ ಈತನ ಈ ವಿಡಿಯೋ ನೋಡಿದ ನೆಟ್ಟಿಗರು ಒಂದೊಂದು ರೀತಿಯಲ್ಲಿ ಕಮೆಂಟ್​ ಮಾಡಿದ್ದಾರೆ. ನಿಮ್ಮ ಎಣಿಕೆ ನಿಖರವಾಗಿತ್ತು ಎಂದು ನಾವು ಹೇಗೆ ನಂಬುವುದು ಎಂದು ಒಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದರೆ, ನಿರುದ್ಯೋಗವೇ ಇದಕ್ಕೆ ಕಾರಣ ಎಂದು ತುಂಬಾ ಜನ ವ್ಯಂಗ್ಯವಾಡಿದ್ದಾರೆ.