ನವದೆಹಲಿ: ನಮ್ಮ ಸುತ್ತಮುತ್ತ ನಡೆಯುವ ಹಲವು ಘಟನೆಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ವೇಗವಾಗಿ, ವ್ಯಾಪಕವಾಗಿ ಹರಿದಾಡುವುದು ಇತ್ತೀಚೆಗೆ ತೀರ ಸಾಮಾನ್ಯ. ಆ ಪೈಕಿ ಇದೀಗ ಈ ಹಿಂದೆ ವೈರಲ್ ಆಗಿದ್ದ ವಿಡಿಯೋವೊಂದು ಈಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಆಗುವ ಮುಖೇನ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಇಲ್ಲದ ಸದನ ದೇವರಿಲ್ಲದ ಗುಡಿಯಂತೆ
ವ್ಯಕ್ತಿಯೊಬ್ಬ ಹಾವನ್ನು ತುಂಬಿರುವ ಚೀಲವನ್ನು ಹಿಡಿದು ಕಾಡಿನ ಮಧ್ಯೆ ಬಿಡುವ ದೃಶ್ಯ ಒಮ್ಮೆ ನೋಡುಗರ ಮೈಜುಮ್ ಎನ್ನಿಸದೆ ಇರದು. ಚೀಲದಿಂದ ರಾಶಿ ರಾಶಿ ಉರಗವನ್ನು ನೆಲದ ಮೇಲೆ ಸುರಿಯುವ ವ್ಯಕ್ತಿ, ಅದನ್ನು ಧೈರ್ಯದಿಂದ ತನ್ನ ಕೈಯಿಂದಲೇ ಹರಡುವ ಮೂಲಕ ವೇಗವಾಗಿ ಚಲಿಸುವಂತೆ ಮಾಡುತ್ತಾರೆ.
ಈ ದೃಶ್ಯ ಇದೀಗ ನೆಟ್ಟಿಗರ ಗಮನವನ್ನು ಮತ್ತೊಮ್ಮೆ ಸೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).