Trimmer: ಮನೆಯಲ್ಲಿ ಟ್ರಿಮ್ಮರ್ ಚಾರ್ಜ್ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಘಟನೆ ಯೆಂಡಪಲ್ಲಿ ಮಂಡಲದ ಮುಂಜಂಪಲ್ಲಿ ಗ್ರಾಮದಲ್ಲಿ ಭಾನುವಾರ (ಜೂ.8) ನಡೆದಿದೆ.
32 ವರ್ಷದ NREGS ಕಾರ್ಯಕರ್ತನಾದ ತಿರುಪತಿ ಬಾತ್ರೂಮ್ನಲ್ಲಿ ಟ್ರಿಮ್ಮರ್ ಚಾರ್ಜಿಂಗ್‌ಗಾಗಿ ಪ್ರಯತ್ನಿಸುತ್ತಿರುವಾಗ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ತಿರುಪತಿ ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಕುಟುಂಬದವರಿಗೆ ಹೇಳಿದರು.
ಈ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)