ನ್ಯೂಸ್

ಬೆಂಗಳೂರಲ್ಲಿ ತಿಂಗಳಿಗೆ 4 ಲಕ್ಷ ರೂ. ಬಾಡಿಗೆ ಮನೆ! ಐಷಾರಾಮಿ ಮನೆ ಹೇಗಿದೆ ನೋಡಿ...Bengaluru

Bengaluru : : ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಜೀವನ ವೆಚ್ಚ ಗಗನಕ್ಕೇರುತ್ತಿದೆ. ಮೆಕ್ಸಿಕನ್ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನಲ್ಲಿ ವಾಸಿಸಲು ಮಾಸಿಕ 4 ಲಕ್ಷ ರೂಪಾಯಿ ಬಾಡಿಗೆ ಪಾವತಿಸುವ ಮೂಲಕ ಸುದ್ದಿಯಾಗುತ್ತಿದ್ದಾರೆ. ನಂದಿ ಹಿಲ್ಸ್ ರಸ್ತೆಯಲ್ಲಿರುವ ತನ್ನ ಐಷಾರಾಮಿ ಆಸ್ತಿಯನ್ನು ಅವರು ವೀಕ್ಷಿಸುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

@theshashankp ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ, ಈತ ಮೆಕ್ಸಿಕನ್ ಮೂಲದವನಾಗಿದ್ದು, ಬೆಂಗಳೂರಿನ ಹೊರವಲಯದ ನಂದಿ ಹಿಲ್ಸ್ ರಸ್ತೆಯಲ್ಲಿ ಮನೆಗೆ ತಿಂಗಳಿಗೆ 4 ಲಕ್ಷ ಬಾಡಿಗೆ ಪಾವತಿಸುತ್ತಿದ್ದಾನೆ ಎಂಬ ಸಂಗತಿ ಬಹಿರಂಗವಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಯುವತಿಯೊಬ್ಬಳು ಈ ವ್ಯಕ್ತಿಯನ್ನು ಭೇಟಿಯಾಗಿ, ‘ನೀವು ತಿಂಗಳಿಗೆ ಎಷ್ಟು ಬಾಡಿಗೆ ಪಾವತಿಸುತ್ತೀರಿ?’ ಎಂದು ಕೇಳಿದಾಗ, ಅವನು 4 ಲಕ್ಷ ರೂ.' ಎಂದು ಉತ್ತರಿಸುತ್ತಾನೆ. ಈ ಉತ್ತರ ಕೇಳಿ ಯುವತಿ ಶಾಕ್ ಆಗುತ್ತಾರೆ. ನಂತರ ಅವರ ಮನೆಯನ್ನು ಒಮ್ಮೆ ಭೇಟಿ ಮಾಡುವುದಾಗಿ 'ಹೋಮ್ ಟೂರ್' ಹೇಳಿ ಅವರೊಂದಿಗೆ ಹೋಗುತ್ತಾರೆ.

 ತನ್ನ ಮನೆ ಮತ್ತು ಅದರ ಸೌಲಭ್ಯಗಳನ್ನು ತೋರಿಸುತ್ತಿದ್ದಾನೆ. 'ಮನೆಯಲ್ಲಿ ಸುಂದರ ಒಳಾಂಗಣ ತೋಟ, ಖಾಸಗಿ ಈಜುಕೊಳ, ವಿಶಾಲ ಲಿವಿಂಗ್ ರೂಮ್, ಸುಸಜ್ಜಿತ ಸ್ನಾನಕೋಣೆ ಮತ್ತು ಮೆಕ್ಸಿಕೋದಿಂದ ಇಂಪೋರ್ಟ್ ಮಾಡಿಕೊಳ್ಳಲಾದ ಪೀಠೋಪಕರಣಗಳಿವೆ. ಮನೆ ತುಂಬಾ ಹಸಿರು ಪರಿಸರವೇ ತುಂಬಿಕೊಂಡಿದೆ.

ಈ ವಿಡಿಯೋ ಈಗಾಗಲೇ 1.4 ಮಿಲಿಯನ್‌ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. 16 ಸಾವಿರಕ್ಕೂ ಅಧಿಕ ಲೈಕ್ಸ್ ಹಾಗೂ 1.4 ಸಾವಿರ ರಿಟ್ವೀಟ್ ಮತ್ತು 250ಕ್ಕೂ ಅಧಿಕ ಕಾಮೆಂಟ್‌ಗಳು ಹರಿದುಬಂದಿವೆ.