ನ್ಯೂಸ್

ಹೆಂಡತಿ-ಮಗನ ಮೇಲೆ ಲಾರಿ ಹರಿಸಿ ಕೊಂದ ಕ್ರೂರಿ; ಆರೋಪಿ ಅರೆಸ್ಟ್

ರಾಜ್​ಕೋಟ್​: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಪುತ್ರ, ಪತ್ನಿ ಹಾಗೂ ಆತನ ಲಿವ್​ ಇನ್​ ಪಾರ್ಟ್​ನರ್​ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿರುವ ಘಟನೆ ಗುಜರಾತಿನ ರಾಜ್​ಕೋಟ್​ನಲ್ಲಿ ನಡೆದಿದೆ.

ಮೃತರನ್ನು ಪ್ರವೀಣ್ (11), ಪಾರುಲ್​ ಬೆನ್ (32), ನವನೀತ್ ವರು (24) ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಆರೋಪಿ ಪ್ರವೀಣ್ ದಫ್ಡಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿ ಪ್ರವೀಣ್​ ದಫ್ಡಾ ಹಾಗೂ ಪಾರುಲ್​ ದಂಪತಿಗಳ ನೇರ್ಪಟ್ಟು ಕೆಲ ವರ್ಷಗಳಾಗಿತ್ತು. ಆಕೆ ನವನೀತ್​ ವರು ಎಂಬ ವ್ಯಕ್ತಿಯ ಜತೆಗೆ ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದಳು. ಈ ವಿಚಾರವಾಗೊಇ ಆರೋಪಿ ಹಲವು ಬಾರಿ ಆಕೆಯ ಜತೆ ಜಗಳವಾಡಿದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ತನ್ನ ಪತ್ನಿಯ ನಡೆಯಿಂದ ತೀವ್ರವಾಗಿ ಅಸಮಾಧಾನಗೊಂಡಿದ್ದ ಆರೋಪಿ ಸೋಮವಾರ ಕಂಟೈನರ್​ ಲಾರಿ ಒಂದನ್ನು ಬಾಡಿಗೆಗೆ ಪಡೆದು ಮೂವರು ಚಲಿಸುತ್ತಿದ್ದ ಬೈಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಮೊದಲಿಗೆ ಅಪಘಾತ ಎಂದು ಪ್ರಕರಣ ದಾಖಲಸಿಕೊಂಡ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರ ಬಂದಿದೆ.

ಬಂಧಿತ ಆರೋಪಿ ವಿರುದ್ಧ ಭಾರತ ದಂಡ ಸಂಹಿತೆ 302 (ಕೊಲೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಚಾರ್ಜ್​ಶೀಟ್​ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.