ನ್ಯೂಸ್

ಭಾವಿ ಪತ್ನಿ ಬಿಟ್ಟು ಹೋದರೂ ಸಂಭ್ರಮದಿಂದ ಮದುವೆಯಾದ ಈತ; ಹಾಗಂತ ಬೇರೆ ಹುಡುಗಿಯನ್ನಲ್ಲ..!

ಮದುವೆಯಲ್ಲ ಫಿಕ್ಸ್​ ಆಗಿ, ಇನ್ನೇನು ಎಲ್ಲ ಸಿದ್ಧತೆಗಳೂ ನಡೆಯುತ್ತಿರುತ್ತವೆ. ನಿಶ್ಚಿತಾರ್ಥವೂ ಆಗಿರುತ್ತದೆ. ಆದರೆ ಏನೋ ಎಡವಟ್ಟಾಗಿ ಬ್ರೇಕ್​ ಅಪ್​ ಆಗುತ್ತದೆ. ಆಗ ನಾವು ಏನು ಮಾಡಬಹುದು? ಹೋಗಿದ್ದು ಹೋಯಿತು ಎಂದು ಇನ್ನೊಂದು ಕಡೆ ಸಂಬಂಧ ಬೆಳೆಸಲು ಪ್ರಯತ್ನಿಸಬಹುದು, ಅಥವಾ ಮುರಿದುಹೋದ ಸಂಬಂಧವನ್ನೇ ಮತ್ತೆ ಕಟ್ಟಲು ಯತ್ನಿಸಬಹುದು...ಹೀಗೆ ಸಂಬರ್ಧ, ಮನಸಿಗೆ ಹೇಗೆ ಬರುತ್ತದೆಯೋ ಹಾಗೇ ಮುಂದಡಿ ಇಡಬೇಕಾಗುತ್ತದೆ. ಆದರೆ ಇಲ್ಲೋರ್ವ ವ್ಯಕ್ತಿ ವಿಭಿನ್ನ ನಿರ್ಧಾರ ತೆಗೆದುಕೊಂಡು ಸುದ್ದಿಯಾಗಿದ್ದಾರೆ.  ಇದನ್ನೂ ಓದಿ: ಪ್ರಿಯಕರನೊಂದಿಗೆ ಬೆತ್ತಲಾಗಿದ್ದ ಪತ್ನಿಯ ವಿಡಿಯೋ ಲೀಕ್​; ಪತಿ ಮಾಡಿದ್ದೇನು ನೋಡಿ..!

ಡಿಯಾಗೋ ರಾಬೆಲೊ ಮತ್ತು ವಿಟರ್ ಬ್ಯೂನೊ ಕಳೆದ ನವೆಂಬರ್​ನಲ್ಲಿ ಎಂಗೇಜ್​ ಆಗಿದ್ದರು. ಹಾಗೇ ಈ ಬಾರಿ ಅಕ್ಟೋಬರ್​ನಲ್ಲಿ ಮದುವೆಯಾಗಲು ದಿನಾಂಕವನ್ನೂ ಫಿಕ್ಸ್ ಮಾಡಿದ್ದರು. ಆದರೆ ಕಳೆದ ಮೇ ತಿಂಗಳು ಮತ್ತು ಜೂನ್​​ನಲ್ಲಿ ಡಿಯಾಗೋ ಮತ್ತು ವಿಟರ್​ ನಡುವೆ ಒಂದೇ ಸಮ ಜಗಳ ಆಗಿ, ವಿಟರ್​ ದೂರ ಹೋದರು. ಇವರ ಮದುವೆ ಮುರಿದುಬಿತ್ತು.

ಆದರೆ ಡಿಯಾಗೋ ಮದುವೆಯನ್ನು ನಿಲ್ಲಿಸಲು ಇಷ್ಟಪಡಲಿಲ್ಲ. ಹಾಗಂತ ವಿಟರ್​​ಳನ್ನು ವಾಪಸ್ ಕರೆಯಲೂ ಇಲ್ಲ. ಬದಲಿಗೆ ತಮ್ಮನ್ನು ತಾವೇ ವಿವಾಹವಾದರು. ಬ್ರೆಜಿಲ್​ನ ಇಟಾಕೆರ್​ನ ಬಾಹಿಯಾ ಎಂಬಲ್ಲಿ ಹೀಗೊಂದು ಸೋಲೋ ಮದುವೆಯಾಗಿದೆ.  ಸುಮಾರು 40 ಅತಿಥಿಗಳೂ ಡಿಯಾಗೋ ಮದುವೆಯಲ್ಲಿ ಪಾಲ್ಗೊಂಡಿದ್ದರು. ವಿಟರ್​​ಳ ಕುಟುಂಬ, ಸ್ನೇಹಿತರು ಹಾಜರಿರಲಿಲ್ಲ. ಇದನ್ನೂ ಓದಿ: ರಷ್ಯಾ ಅಧ್ಯಕ್ಷರಿಗೆ ಗಂಭೀರ ಕಾಯಿಲೆ? ಜನವರಿಯಲ್ಲೇ ರಾಜೀನಾಮೆ ನೀಡಲಿದ್ದಾರಂತೆ ಪುತಿನ್​ !

ಕನ್ನಡಿಯ ಎದುರು ನಿಂತು ತಮ್ಮನ್ನು ತಾವೇ ಮದುವೆಯಾದ ಡಿಯಾಗೋ, ನನ್ನ ಪಾಲಿಗೆ ಈ ದಿನ ತುಂಬ ಸಂತೋಷ ತಂದಿದೆ. ನನ್ನ ಜೀವನದಲ್ಲಿ ನಾನು ಅತ್ಯಂತ ಪ್ರೀತಿಸುವ ಜನರೆಲ್ಲ ಇಂದು ನನ್ನೊಂದಿಗೆ ಇದ್ದಾರೆ. ನಿಜಕ್ಕೂ ಇದೊಂದು ದುಃಖದ ದಿನ ಆಗಬೇಕಿತ್ತು. ಆದರೆ ನಾನದನ್ನು ಹಾಸ್ಯದ ದಿನವಾಗಿ ಪರಿವರ್ತಿಸಿದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನಾನು ಸಂತೋಷವಾಗಿರಲು ಮದುವೆಯನ್ನು ಅವಲಂಬಿಸಿಲ್ಲ. ನಾನು ಬೇರೆ ಹುಡುಗಿಯನ್ನು ಮದುವೆಯಾಗುತ್ತೇನೆ..ನನಗೆ ಮಕ್ಕಳು ಬೇಕು..ಹಾಗಂತ ಖುಷಿಗೆ ಅದನ್ನೇ ನೆಚ್ಚಿಕೊಂಡಿಲ್ಲ ಎಂದೂ ಹೇಳಿದ್ದಾರೆ. (ಏಜೆನ್ಸೀಸ್​)