ಮಧ್ಯಪ್ರದೇಶ: ( sridevi ) ನೀವು ನಟ-ನಟಿಯರ ಹುಚ್ಚು ಅಭಿಮಾನಿಗಳನ್ನು ನೋಡಿರಬೇಕು. ಆದರೆ ಮಧ್ಯಪ್ರದೇಶದ ಒಬ್ಬ ವ್ಯಕ್ತಿಗೆ ದಿವಂಗತ ನಟಿ ಶ್ರೀದೇವಿ ಬಗ್ಗೆ ಇರುವ ಹುಚ್ಚುತನವನ್ನು ನೀವು ಬಹುಶಃ ಎಂದಿಗೂ ನೋಡಿರಲಿಕ್ಕಿಲ್ಲ. ಈ ವ್ಯಕ್ತಿ ಹಲವು ವರ್ಷಗಳ ಹಿಂದೆ ಶ್ರೀದೇವಿಯವರ ಫೋಟೋವನ್ನು ಮದುವೆಯಾಗಿದ್ದ. ಶ್ರೀದೇವಿ ಫೆಬ್ರವರಿ 24, 2018 ರಂದು ನಿಧನರಾದಾಗ, ಈ ವ್ಯಕ್ತಿ ಐದು ದಿನಗಳ ಕಾಲ ಆಹಾರ ಸೇವಿಸಲಿಲ್ಲ. ಇಂದಿಗೂ ಅವನು ಗಂಡನ ಎಲ್ಲಾ ಕರ್ತವ್ಯಗಳನ್ನು ಪೂರೈಸುತ್ತಿದ್ದಾನೆ ಎನ್ನಲಾಗಿದೆ.
ಈ ವ್ಯಕ್ತಿಯ ಹೆಸರು ಒ.ಪಿ. ಮೆಹ್ರಾ. ಶ್ರೀದೇವಿಯನ್ನೇ ಪತ್ನಿ ಎಂದು ಪರಿಗಣಿಸಿದ್ದ ಓ.ಪಿ. ಮೆಹ್ರಾ,. ಶ್ರೀದೇವಿಯ ಸಾವಿನ ಸುದ್ದಿ ಕೇಳಿದ ನಂತರ, ಮರಣದ ನಂತರ ಗಂಡ ಆಗಿ ಮಾಡುವ ಎಲ್ಲಾ ಆಚರಣೆಗಳನ್ನು ಮಾಡಿದರು. ಪ್ರಸಿದ್ಧ ನಟಿ ದಿವಂಗತ ಶ್ರೀದೇವಿಯವರ ಪುಣ್ಯತಿಥಿಯನ್ನು ಪ್ರತಿ ವರ್ಷ ಫೆಬ್ರವರಿ 24 ರಂದು ಈ ಗ್ರಾಮದಲ್ಲಿ ಆಚರಿಸಲಾಗುತ್ತದೆ ಮತ್ತು ಇಡೀ ಗ್ರಾಮವನ್ನು ಆಹ್ವಾನಿಸಿ ಔತಣಕೂಟವನ್ನು ಆಯೋಜಿಸಲಾಗುತ್ತದೆ ಮತ್ತು ಶ್ರದ್ಧಾಂಜಲಿ ಸಭೆಯನ್ನು ಸಹ ಆಯೋಜಿಸಲಾಗುತ್ತದೆ. ಈ ಹಬ್ಬ ಮತ್ತು ಶ್ರದ್ಧಾಂಜಲಿ ಸಭೆಗಾಗಿ ಇಡೀ ಗ್ರಾಮವು ಒಟ್ಟುಗೂಡುತ್ತದೆ.
ಒ.ಪಿ. ಮೆಹ್ರಾ ದಿವಂಗತ ಶ್ರೀದೇವಿಯವರನ್ನು ತಮ್ಮ ಪತ್ನಿ ಎಂದು ಪರಿಗಣಿಸುತ್ತಾರೆ, ಈ ಕಾರಣದಿಂದಾಗಿ ಅವರು ಬೇರೆ ಯಾವುದೇ ಮಹಿಳೆಯನ್ನು ಮದುವೆಯಾಗಲಿಲ್ಲ. ಓ ಪಿ ಮೆಹ್ರಾ ಅವರು ಶ್ರೀದೇವಿಯನ್ನು ಮದುವೆಯಾದ ಅದೇ ಫೋಟೋದ ಸಹಾಯದಿಂದ ಇನ್ನೂ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.
ಶ್ರೀದೇವಿಯವರ ಮರಣದ ನಂತರ ಹಿಂದೂ ಪದ್ಧತಿಗಳ ಪ್ರಕಾರ ಎಲ್ಲಾ ಆಚರಣೆಗಳನ್ನು ನಡೆಸಿದ್ದೇನೆ ಎಂದು ಗ್ರಾಮಸ್ಥ ಕುಂಜ್ಬಿಹಾರಿ ಚೌಧರಿ ಹೇಳಿದ್ದಾರೆ. ಗ್ರಾಮದ 101 ಬಾಲಕಿಯರಿಗೆ ಆಹಾರವನ್ನು ಸಹ ಒದಗಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಫೆಬ್ರವರಿ 24 ರಂದು ಶ್ರೀದೇವಿಯವರ ಪುಣ್ಯತಿಥಿಯಂದು ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು, ಇದರಲ್ಲಿ ಗ್ರಾಮದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.