ನ್ಯೂಸ್

ಕೌಟುಂಬಿಕ ಕಲಹ: ಪತ್ನಿಯಿಂದ ದೂರವಾದ ಪತಿ ಸಾವಿಗೆ ಶರಣು

Video - Jyothi Bhat

ನೆಲಮಂಗಲ: ಕೌಟುಂಬಿಕ ಕಲಹದ ಹಿನ್ನೆಲೆ ಮನನೊಂದ ವ್ಯಕ್ತಿ ಸಾವಿಗೆ ಶರಣಾದ ಘಟನೆಯೊಂದು ನಡೆದಿದೆ. ಪತಿ ಪತ್ನಿ ನಡುವೆ ಜಗಳವಾಗಿದ್ದು, ಕಳೆದ 4-5 ತಿಂಗಳುಗಳಿಂದ ಪತ್ನಿಯನ್ನು ತೊರೆದು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ ವ್ಯಕ್ತಿ ಇದೀಗ ದಿಢೀರನೇ ಈ ರೀತಿ ನಿರ್ಧಾರ ತೆಗೆದುಕೊಂಡಿದ್ದಾರೆ.

ನೆಲಮಂಗಲದ ಬಿಲ್ಲಿನಕೋಟೆ ಗ್ರಾಮದ ನಿವಾಸಿ ಈಶ್ವರ್ (49) ಮೃತಪಟ್ಟ ವ್ಯಕ್ತಿಯಾಗಿದ್ದು, ಈತ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಈ ಕುರಿತು ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.