ನ್ಯೂಸ್

ರೈಲ್ ಬರುವುದು ತಡವಾಯಿತೆಂದು ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್ ದಾಟಿದ ವ್ಯಕ್ತಿ; ಹುಚ್ಚುಸಾಹಸದ Video Viral

ನವದೆಹಲಿ: ಸಾಮಾನ್ಯವಾಗಿ ನಾವು ಪ್ರತಿನಿತ್ಯ ಕೆಲಸಕ್ಕೆ ಹೋಗಬೇಕೆಂದುಕೊಂಡರು ಟ್ರಾಫಿಕ್ ಕಿರಿಕಿರಿಯಿಂದ ತಡವಾಗಿ ತಲುಪುತ್ತೇವೆ. ಈ ರೀತಿಯ ಘಟನೆಗಳು ನಮ್ಮ ಜೀವನದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಒಂದೊಮ್ಮೆ ರೈಲುಗಳು ಓಡಾಡುವ ಪ್ರದೇಶದಲ್ಲಿ ನಾವೇನಾದರು ಪ್ರಯಾಣಿಸುತ್ತಿದ್ದರೆ, ರೈಲುಗಳು ಓಡಾಡುವ ಸಮಯದಲ್ಲಿ ಒಂದಷ್ಟು ಹೊತ್ತುಗಳ ಕಾಲ ರೈಲ್ವೆ ಗೇಟ್‌ ಮುಚ್ಚುತ್ತಾರೆ. ಇದರಿಂದ ಗಂಟೆಗಟ್ಟಲೇ ಕಾದು ಸವಾರು ಹೈರಾಣಾಗುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ರೈಲ್ವೆ ಗೇಟ್‌ ಮುಚ್ಚಿದ್ದ ಸಂದರ್ಭದಲ್ಲಿ ರೈಲ್ವೆ ಗೇಟ್ ಮುಚ್ಚಿದಾಗ ಮಾಡಿದ ಕೆಲಸವೊಂದು ಸಖತ್ ಸೌಂಡ್ ಮಾಡುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ವ್ಯಕ್ತಿಯೊಬ್ಬರು ರೈಲ್ವೆ ಗೇಟ್ ಹಾಕಿದಂತಹ ಸಂದರ್ಭದಲ್ಲಿ ಕಾಯಲು ಸಮಯವಿಲ್ಲದ ಕಾರಣ ಆತ ತನ್ನ ಬೈಕನ್ನ ಹೆಗಲ ಮೇಲೆ ಹೊತ್ತುಕೊಂಡು ರೈಲ್ವೆ ಕ್ರಾಸಿಂಗ್‌ ದಾಟಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದ್ದು, ವ್ಯಕ್ತಿಯನ್ನು ಆಧುನಿಕ ಬಾಹುಬಲಿ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋ (Video Viral) ನೋಡುವುದಾದರೆ, ರೈಲ್ವೆ ಕ್ರಾಸಿಂಗ್​ನಲ್ಲಿ ವ್ಯಕ್ತಿಯೊಬ್ಬ ಬೈಕನ್ನು ಹೆಗಲ ಮೇಲೆ ಹೊತ್ತು ದಾಟುತ್ತಿರುವುದನ್ನು ನೋಡಬಹುದಾಗಿದೆ. ರೈಲ್ವೆ ಗೇಟ್ ಸುಮಾರು ಹೊತ್ತು ಹಾಕಿದ್ದ ಕಾರಣ ವ್ಯಕ್ತಿ ಈ ರೀತಿ ಮಾಡಿದ್ದು, gharkekalesh ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಮಾರ್ಚ್ 06ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ವ್ಯಕ್ತಿಯ ಸಾಹಸ ಕಂಡು ಬೆರಗಾಗಿ ಕಮೆಂಟ್ ಹಾಕುತ್ತಿದ್ದಾರೆ. ಆತನಿಗೆ ಸಮಯ ವ್ಯರ್ಥ ಮಾಡುವುದು ಇಷ್ಟವಿಲ್ಲ ಎಂದು ಕಾಣಿಸುತ್ತದೆ ಎಂದು ಕೆಲವರು ಕಮೆಂಟ್ ಹಾಕಿದರೆ ಮತ್ತಷ್ಟು ಜನ ಇದು ಹುಚ್ಚುತನದ ಪರಮಾವಧಿ ಎಂದು ಟೀಕಿಸಿ ಕಮೆಂಟ್ ಹಾಕಿದ್ದಾರೆ.