ನ್ಯೂಸ್

ತಾಯಿಯ ಎದುರೇ ವರದಕ್ಷಿಣೆಗಾಗಿ ಹೆಂಡತಿಯನ್ನೇ ಕೊಲೆ ಮಾಡಿದ ಪಾಪಿ , ಸೆರೆಯಾಗಿದ್ದು ಹೀಗೆ

ಲಖನೌ: ವರದಕ್ಷಿಣೆಗಾಗಿ ಹೆಂಡತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗುತ್ತಿದ್ದ ಪಾಪಿ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಮೇ 2 ರಂದು ಮಹಿಳೆ ಆಗಷ್ಟೇ ಮನೆಗೆ ಬಂದಿದ್ದ ತನ್ನ ತಾಯಿಯೊಂದಿಗೆ ಮಾತುಕತೆ ನಡೆಸುತ್ತಿದ್ದಳು. ಈ ವೇಳೆ ವರದಕ್ಷಿಣೆ ಬೇಕೆಂದು ಹೇಳಿದ್ದಾನೆ. ವರದಕ್ಷಿಣೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡ ಈತ ಅಲ್ಲೇ ಇದ್ದ ಚಾಕುವಿನಿಂದ ಇರಿದು ಆಕೆಯನ್ನು ಹತ್ಯೆ ಮಾಡಿದ್ದಾನೆ.

ಕಣ್ಣಮುಂದೆಯೇ ಮಗಳನ್ನು ಚಾಕುವಿನಿಂದ ಇರಿದಿದ್ದು, ನೊಡಲಾಗದೇ ಬಿಡಿಸಲು ಹೋದ ಆಕೆಯ ತಾಯಿಗೂ ಗಾಯಗಳಾಗಿದೆ. ಇವರ ಕಿರುಚಾಟ ಕೇಳಿ ನೆರೆಹೊರೆಯವರು ಧಾವಿಸಿ ಬಂದಿದ್ದಾರೆ.

ಜನರು ಸೇರುತ್ತಿದ್ದಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ತಕ್ಷಣವೇ ಎಚ್ಚೆತ್ತ ಜನರು ಆತನನ್ನು ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.