ನ್ಯೂಸ್

ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆಗೈದ ಪಾಪಿ ಪತಿ! ಕೊಲೆಗೆ ಕಾರಣ ಅಸ್ಪಷ್ಟ | Murder Case

Murder Case: ಪತ್ನಿ ಮತ್ತು ತನ್ನಿಬ್ಬರು ಮುದ್ದಾದ ಮಕ್ಕಳನ್ನು ಕೊಲೆಗೈದ ಪಾಪಿ, ಸ್ಥಳದಿಂದ ಪರಾರಿಯಾದ ಘಟನೆ ದೆಹಲಿಯ ಕರವಾಲ್​ನಲ್ಲಿ ವರದಿಯಾಗಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಖಾಕಿ ಪಡೆ, ಆರೋಪಿಗಾಗಿ ಹುಡುಕಾಟ ನಡೆಸುತ್ತಿದೆ.

ಆ.08ರ ರಾತ್ರಿ ದೆಹಲಿಯ ಕರವಾಲ್ ನಗರದ ಮನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತ ಮಹಿಳೆಯನ್ನು ಜಯಶ್ರೀ (28) ಎಂದು ಗುರುತಿಸಲಾಗಿದೆ. ಕೊಲೆಗೆ ಪತಿ-ಪತ್ನಿ ನಡುವೆ ಪದೇ ಪದೇ ನಡೆಯುತ್ತಿದ್ದ ಜಗಳವೇ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದಾಗ್ಯೂ, ನಿಖರವಾದ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಪ್ರಸ್ತುತ, ಪ್ರಕರಣದ ಬೆನ್ನತ್ತಿರುವ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮನೆಯೊಳಗೆ ಮೂವರ ಶವ ಪತ್ತೆಯಾಗಿದ್ದು, ಕೊಲೆಗೈಯಲು ಆತ ಬಳಿಸಿದ ವಸ್ತುಗಳು ಯಾವುದು? ಎಂಬುದನ್ನು ಕಲೆಹಾಕಿರುವ ಖಾಕಿ ಪಡೆ, ವಿಧಿವಿಜ್ಞಾನ ತಂಡಗಳ ಸಹಾಯದಿಂದ ಒಂದಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ದೆಹಲಿಯ ಜಿಟಿಬಿ ಆಸ್ಪತ್ರೆಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಮೃತ ಮಹಿಳೆಯ ಕುಟುಂಬಸ್ಥರ ಪ್ರಕಾರ, ದಂಪತಿಗಳು ಆಗಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದರು. ಅವರಿಬ್ಬರ ಮಧ್ಯೆ ನಡೆಯುತ್ತಿದ್ದ ವಿಪರೀತ ಜಟಾಪಟಿಯೇ ಕೊಲೆಗೆ ಕಾರಣವಿರಬಹುದು ಎಂದಿದ್ದಾರೆ. ಸ್ಥಳೀಯರು ಸಹ ಇದೇ ಮಾತನ್ನು ಹೇಳಿರುವುದು ಸದ್ಯ ಪೊಲೀಸರ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ಮಾಡಿದೆ,(ಏಜೆನ್ಸೀಸ್).