ನ್ಯೂಸ್

2 ಸಾವಿರ ರೂ. ಪಾಕೆಟ್​ ಮನಿ ನಿರಾಕರಿಸಿದ್ದಕ್ಕೆ ತಂದೆಯನ್ನೇ ಕೊಂದ ಮಗ!

ಇಂದೋರ್​: ಆಘಾತಕಾರಿ ಘಟನೆ ಒಂದರಲ್ಲಿ 2 ಸಾವಿರ ರೂ. ಹಣ ಖರ್ಚಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮಗನೇ ತಂದೆಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಮೃತರನ್ನು ಬಾಬು ಚೌಧರಿ(50) ಎಂದು ಗುರುತಿಸಲಾಗಿದ್ದು, ಆತನ ಪುತ್ರ ಸೋಹನ್​ ಚೌಧರಿ(25)ಯನ್ನು ಪೊಲೀಸರಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ಧಾರೆ.

ಸಾಂದರ್ಭಿಕ ಚಿತ್ರ

ಮಾದಕವ್ಯಸನಿ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹಿತಿಕಾ ವಸಲ್ ವೃತ್ತಿಯಲ್ಲಿ ರೈತರಾಗಿರುವ ಬಾಬು ಚೌಧರಿ ಇಂದೋರ್​ಮ ದೇಪಾಲ್​ಪುರ ಎಂಬ ಪ್ರದೇಶದಲ್ಲಿ ವಾಸವಿದ್ದರು. ಅವರ ಪುತ್ರ ಸೋಹನ್​ ಮಾದಕವ್ಯಸನಿಯಾಗಿದ್ದು, ತಂದೆಯ ಬಳಿ ಖರ್ಚಿಗೆಂದು 2 ಸಾವಿರ ರೂ. ಹಣ ಕೇಳಿದ್ದಾನೆ.

ಹಣ ಕೊಡಲು ನಿರಾಕರಿಸಿದ್ದರಿಂದ ಕುಪಿತಗೊಂಡ ಸೋಹನ್​ ಕಲ್ಲಿನಿಂದ ತನ್ನ ತಂದೆಯ ತಲೆಯನ್ನು ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಯೂ ಸಂಬಂಧಿಕರೊಬ್ಬರ ಜಮೀನಿನಲ್ಲಿ ಅಡಗಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹಿತಿಕಾ ವಸಲ್ ತಿಳಿಸಿದ್ದಾರೆ.