ನ್ಯೂಸ್

ಬೋಳು ತಲೆ ಮರೆಮಾಚಲು ಹೀಗಾ ಮಾಡೋದು! ಈ ವ್ಯಕ್ತಿ ಧರಿಸಿರುವುದೇನು ಗೊತ್ತೇ? ತಿಳಿದ್ರೆ ನಗ್ತೀರಾ

ಅಮೆರಿಕಾ: ಸಾಮಾನ್ಯವಾಗಿ ಬೋಳು ತಲೆ ಇರುವವರು ತಮ್ಮ ಕೂದಲಿಲ್ಲದ ತಲೆಯನ್ನು ನಾನಾ ಬಗೆಯ ಟೋಪಿಗಳಿಂದ ಮುಚ್ಚಿಕೊಳ್ಳುತ್ತಾರೆ ಅಥವಾ ವಿಗ್ ಬಳಸುವ ಮುಖೇನ ಸಾರ್ವಜನಿಕರ ನಗೆಯಿಂದ ದೂರ ಉಳಿಯಲು ಬಯಸುತ್ತಾರೆ. ಈ ಎರಡು ಆಯ್ಕೆ ಬಿಟ್ಟರೆ ಬೊಕ್ಕು ತಲೆ ಮರೆಮಾಚಲು ಇನ್ಯಾವುದು ಸರಿಹೊಂದಲ್ಲ. ಆದ್ರೆ, ಇಲ್ಲೊಬ್ಬ ವ್ಯಕ್ತಿ ತಾನು ಹೊಸತನ್ನು ಬಯಸುವ ಜೀವ ಎಂಬುದನ್ನು ವಿಭಿನ್ನ ರೀತಿಯಲ್ಲಿ ತೋರಿಸಿರುವುದು ಇದೀಗ ಹಲವರ ನಗುವಿಗೆ ಕಾರಣವಾಗಿದೆ.

ಅಮೆರಿಕಾದ ನ್ಯೂಯಾರ್ಕ್​ನ ಸಬ್​ವೇಯಲ್ಲಿ ಪ್ರಯಾಣಿಸುತ್ತಿದ್ದ ಅನಾಮಧೇಯ ವ್ಯಕ್ತಿಯೊಬ್ಬ ತನ್ನ ಬೊಕ್ಕು ತಲೆ ಮುಚ್ಚಿಕೊಳ್ಳಲು ಹ್ಯಾಟ್​ ಅಥವಾ ವಿಗ್ ಬಳಸುವ ಬದಲಿಗೆ ಬೇಕರಿ ತಿನಿಸಾದ ಬನ್​ ಅನ್ನು ತಲೆಯ ಮೇಲಿಟ್ಟುಕೊಂಡ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಡಿಯೋದಲ್ಲಿ ಸಬ್​ವೇ ಪ್ರಯಾಣಿಕ ತನ್ನ ತಲೆ ಮೇಲೆ ದೊಡ್ಡ ಗಾತ್ರದ ಬನ್​ ಅನ್ನು ಇಟ್ಟುಕೊಂಡಿರುವುದು ಕಂಡುಬಂದಿದೆ. ಸಾರ್ವಜನಿಕರ ಸಾರಿಗೆಯಲ್ಲಿ ಈತನ ತಲೆಯನ್ನೇ ಸೂಕ್ಷ್ಮವಾಗಿ ಗಮನಿಸಿದ ಇತರೆ ಪ್ರಯಾಣಿಕರು, ಕುಳಿತಲ್ಲೇ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಕೆಲವರು ಇಂತಹ ದೃಶ್ಯ ಹಿಂದೆಂದೂ ನೋಡಿರಲಿಲ್ಲ. ಇದು ತುಂಬ ವಿಚಿತ್ರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).