ನ್ಯೂಸ್

3ನೇ ಬಾರಿ ಕೂಡ ಹೆಣ್ಣು ಮಗು ಜನಿಸಿತು ಎಂದು ಮಗುವನ್ನೇ ಎಸೆದ ತಂದೆ!

ಮಧ್ಯಪ್ರದೇಶ: ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ವ್ಯಕ್ತಿಯೂ ತನಗೆ ಮೂರನೇ ಬಾರಿ ಕೂಡ ಹೆಣ್ಣು ಮಗುವೇ ಜನಿಸಿತು ಎಂದು ಸಿಟ್ಟಿಗೆದ್ದು, ತನ್ನ ನವಜಾತ ಶಿಶುವನ್ನು(New Born Baby) ನೆಲಕ್ಕೆ ಎಸೆದಿದ್ದಾನೆ.

ಮಧ್ಯಪ್ರದೇಶದ(Madhya Pradesh) ಪಿಲ್ಲಿಬೀತ್​ನಲ್ಲಿ ವಾಸವಿರುವ ವ್ಯಕ್ತಿಯನ್ನು ಫರಾನ್ ಎಂದು ಗುರುತಿಸಲಾಗಿದೆ. ಎಂಟು ವರ್ಷದ ಹಿಂದೆ ಶಭೂ ಎಂಬ ಮಹಿಳೆಯನ್ನು ಮದುವೆಯಾದ ಫರಾನ್, ತನ್ನ ಪತ್ನಿ ಎರಡು ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂದು ನಿಂದಿಸುತ್ತಿದ್ದ(Abuse) ಎಂದು ಹೇಳಲಾಗಿದೆ.

ಮೂರನೇ ಬಾರಿಗೆ ಗರ್ಭಿಣಿಯಾದ ಶಭೂ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಎರಡು ಹೆಣ್ಣು ಮಗುವಿನ ನಂತರ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಪತಿ ಫರಾನ್, ಈ ಸಂಗತಿ ತಿಳಿದು ಆಕ್ರೋಶದಿಂದ ಮಗುವನ್ನು ಹೆಂಡತಿಯ ಮುಂದೆಯೇ ನೆಲಕ್ಕೆ ಎಸೆದಿದ್ದಾನೆ! ಗಾಯಗೊಂಡ ಮಗು ಚಿಕಿತ್ಸೆಯ ಮಧ್ಯೆ ಸಾವನ್ನಪ್ಪಿದೆ(Death).

ಶಭೂ ಅವರ ತಾಯಿ, ಮಗಳ ಪತಿ ಫರಾನ್ ಮತ್ತು ಆತನ ಸಹೋದರರ ವಿರುದ್ಧ ಪೂರ್ನಪುರ್ ಪೊಲೀಸ್ ಠಾಣೆಯಲ್ಲಿ ದೂರು(Complaint) ದಾಖಲಿಸಿದ್ದಾರೆ. ಈ ಘಟನೆ ಬಗ್ಗೆ ಮಾತನಾಡಿದ ಆಸ್ಪತ್ರೆಯ ವೈದ್ಯರು, ಮಗು ಜನಿಸಿದಾಗ ಬಹಳ ದುರ್ಬಲವಾಗಿತ್ತು. ಮತ್ತು ಮಗುವಿನ ಸಾವು ದುರ್ಬಲ ಕಾರಣವೇ ವಿನಃ ನೆಲಕ್ಕೆ ಎಸೆದ ಕಾರಣಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಗಂಡ-ಹೆಂಡತಿ ಇಬ್ಬರು ಪರಸ್ಪರ ಹೊಂದಾಣಿಕೆಗೆ ಬಂದ ಕಾರಣ ಪೊಲೀಸರು ಎಫ್​ಐಆರ್(FIR)​ ದಾಖಲಿಸದೆ ಇಬ್ಬರನ್ನು ಕಳಿಸಿದ್ದಾರೆ,(ಏಜೆನ್ಸೀಸ್).