Viral Video: ಹಲವು ರಾಷ್ಟ್ರಗಳು ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಮದ್ಯದಿಂದಲೇ ಗಳಿಸುತ್ತವೆ ಎಂಬುದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಮದ್ಯದ ಖರೀದಿಯ ಮೇಲೆ ಕುಡುಕರು ಪಾವತಿಸುವ ತೆರಿಗೆಯು ರಾಜ್ಯ ಸರ್ಕಾರಗಳಿಗೆ ದೊಡ್ಡ ಆದಾಯವನ್ನೇ ತಂದುಕೊಡುತ್ತದೆ. ಕುಡಿತಕ್ಕೆ ದಾಸರಾಗಿರುವ ಕೆಲವರಂತು ಕುಡಿಯದ ದಿನವಿಲ್ಲ, ಕುಡಿಯದೆ ಬದುಕಲು ಸಾಧ್ಯವೇ ಇಲ್ಲ ಎನ್ನುತ್ತಾರೆ.
ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಕುಡಿಯುವ ಶೈಲಿ ಇರುತ್ತದೆ. ಕೆಲವರು ಅಚ್ಚುಕಟ್ಟಾಗಿ ಲೋಟಕ್ಕೆ ಎಣ್ಣೆ ಬಗ್ಗಿಸಿಕೊಂಡು ಕುಡಿದರೆ, ಇನ್ನೂ ಕೆಲವರು ಪ್ಯಾಕೆಟ್ ಅಥವಾ ಬಾಟಲಿಯಿಂದಲೇ ನೇರವಾಗಿ ಸೇವಿಸುತ್ತಾರೆ. ಇದು ಅವರವರ ಅನಕೂಲಕ್ಕೆ ತಕ್ಕಂತೆ ಎಂದೂ ಹೇಳಬಹುದು. ಇದಕ್ಕೆ ಸಂಬಂಧಿಸಿದ ಹಲವು ರೀತಿಯ ವಿಡಿಯೊಗಳು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಮಗೆ ಕಾಣಸಿಗುತ್ತವೆ. ಕೆಲವೊಂದು ನೆಟ್ಟಿಗರಿಂದ ಹೆಚ್ಚು ವೀಕ್ಷಣೆ ಪಡೆದು, ವೈರಲ್ ಸಾಲಿಗೆ ಸೇರಿರುತ್ತವೆ. ಸದ್ಯ ಇಲ್ಲೊಂದು ವಿಡಿಯೋ ಕೂಡ ವೈರಲ್ ಸಾಲಿಗೆ ಸೇರಿದೆ.
ಇದನ್ನೂ ಓದಿ: ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ ‘ದೀಪಾಲಕ್ಷ್ಮಿಯ ಕೈಗಳು’ | Story writing Competition
ಅಪ್ಪಿತಪ್ಪಿ ನೀರು ಮೂಗಿನೊಳಗೆ ಹೋದರೆ ಸಾಕು ಒಂದು ನಿಮಿಷ ವಿಲವಿಲ ಎಂದು ಒದ್ದಾಡುವ ಜನರ ಪೈಕಿ ಇಲ್ಲೊಬ್ಬ ಭೂಪ, ಮದ್ಯವನ್ನೇ ಮೂಗಿನಿಂದ ಕುಡಿದಿದ್ದಾನೆ. ಇದು ನೋಡುಗರ ಅಚ್ಚರಿಗೆ ಕಾರಣವಾಗಿದೆ. ಕುಡುಕನು ಬಹಳ ಉತ್ಸಾಹದಿಂದ ಮದ್ಯಪಾನ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಮೊದಲು ಕೈಯಲ್ಲಿ ದೊಡ್ಡ ಬಿಯರ್ ಗ್ಲಾಸ್ ಹಿಡಿದು, ಯಾವುದೋ ದೇವರಿಗೆ ಬುದ್ಧಿ ಬಂದಂತೆ ಎರಡು ಮೂರು ಬಾರಿ ಹಿಂದೆ- ಮುಂದೆ ತಿರುಗಿಸಿ, ಬಳಿಕ ಗ್ಲಾಸ್‌ನಲ್ಲಿದ್ದ ಬಿಯರ್ ಅನ್ನು ಮೂಗಿಗೆ ತಂದು, ಅದನ್ನು ಕೆಳಗಿಡದೆ ಒಂದೇ ಸಲ ಕುಡಿದು ಮುಗಿಸುತ್ತಾನೆ.
ಈ ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ಗಳ ಸುರಿಮಳೆ ಹರಿಸಿದ್ದು, "ಅವನು ಹೇಗೆ ಕುಡಿದ ಗುರು?" ಎಂದಿದ್ದಾರೆ. ಮತ್ತೊಬ್ಬರು, "ಆ ರೀತಿ ಕುಡಿದು ಆತ ಇನ್ನೂ ಜೀವಂತವಾಗಿದ್ದಾನೆಯೇ?" ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ದೈಶ್ಯ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಹಲವರ ಹುಬ್ಬೇರಿಸಿದೆ,(ಏಜೆನ್ಸೀಸ್).