ನೋಯ್ಡಾ: ಬಿಲ್ ಯಾಕಿಷ್ಟು ಹೆಚ್ಚಾಗಿದೆ ಎಂದು ಕೇಳಿದ್ದೇ ತಪ್ಪಾಯಿತು. ಗ್ರಾಹಕನಿಗೆ ಪಬ್ ನಲ್ಲಿದ್ದ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವ ಘಟನೆ ನೋಯ್ಡಾದ ಮಾಲ್ವೊಂದರಲ್ಲಿ ನಡೆದಿದೆ.
ಸಹೋದ್ಯೋಗಿಗಳೊಂದಿಗೆ ಪಾರ್ಟಿ ಮಾಡಲು ಮಾಡಲು ಬಂದಿದ್ದ ಬ್ರಜೀಶ್ (30) ಎಂಬ ವ್ಯಕ್ತಿ ಬಿಲ್ ಕೊಡಲು ಹೇಳಿದ್ದಾರೆ. ಈ ವೇಳೆ ನೀಡಿದ್ದ ಬಿಲ್ ಯಾಕಿಷ್ಟು ಎಂದು ಕೇಳಿದ್ದೇ ತಡ ಕುಡಿದ ಮತ್ತಿನಲ್ಲಿದ್ದ ಬ್ರಿಜೇಶ್ನನ್ನು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ತೀವ್ರ ಹಲ್ಲೆಗೊಳಗಾದ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ವ್ಯಕ್ತಿಯೋರ್ವ ಬಾರ್ನಲ್ಲಿ ಅತಿ ಹೆಚ್ಚು ಬಿಲ್ ಹಾಕಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ಹಿಗ್ಗಾ-ಮುಗ್ಗಾ ಥಳಿಸಿ ವ್ಯಕ್ತಿಯ ಪ್ರಾಣವನ್ನೇ ತೆಗೆದಿದ್ದಾರೆ. ಪ್ರಕರಣ ಸಂಬಂಧ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಆಯುಕ್ತ ರಣವಿಜಯ್ ಸಿಂಗ್ ತಿಳಿಸಿದ್ದಾರೆ.
ಇನ್ನು ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ಸಿಸಿಟಿವಿಯಿಂದ ಲಭ್ಯವಾಗಿದ್ದು, 12ಕ್ಕೂ ಹೆಚ್ಚು ಮಂದಿ ಈ ಕೃತ್ಯದಲ್ಲಿ ಭಾಯಾಗಿರುವುದು ಕಂಡುಬಂದಿದ್ದು, ನಾಪತ್ತೆಯಾಗಿರುವ ನಾಲ್ವರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಅವರು ತಿಳಿಸಿದ್ದಾರೆ.