ನವದೆಹಲಿ: ಸರ್ಜರಿ ಬಳಿಕ ಪ್ರಾಣ ಕಳೆದುಕೊಂಡ ಅನೇಕ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಕೇಶ ಕಸಿ ಮಾಡಿಸಿಕೊಂಡು ಪ್ರಾಣ ಕಳೆದುಕೊಂಡ ಪ್ರಕರಣವೊಂದು ನಡೆದಿದೆ. ಮೂವತ್ತು ವರ್ಷದ ವ್ಯಕ್ತಿಯೊಬ್ಬ ಕೇಶ ಕಸಿ ಮಾಡಿಸಿಕೊಂಡ ನಂತರ ಸಾವಿಗೀಡಾಗಿದ್ದು, ಮೃತಪಡಲು ತಪ್ಪಾಗಿ ಕೇಶ ಕಸಿ ಮಾಡಿದ್ದೇ ಕಾರಣ ಎಂದು ಆರೋಪಿಸಲಾಗಿದೆ.
ಅಥರ್ ರಶೀದ್ ಎಂಬಾತ ಸಾವಿಗೀಡಾದ ವ್ಯಕ್ತಿ. ದೆಹಲಿಯ ಕ್ಲಿನಿಕ್ವೊಂದರಲ್ಲಿ ಈತ ಕೇಶ ಕಸಿ ಮಾಡಿಸಿಕೊಂಡಿದ್ದು, ಆ ಬಳಿಕ ಸಾವಿಗೀಡಾಗಿದ್ದಾನೆ. ಈತನ ಸಾವಿಗೆ ಅಸರ್ಮಪಕ ಕೇಶಕಸಿಯೇ ಕಾರಣ ಎಂದು ಅಥರ್ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಕೇಶ ಕಸಿ ಮಾಡಿದ್ದ ಸರ್ಜನ್ಗಳಿಬ್ಬರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಅಥರ್ ರಶೀದ್ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದು, ಈತ ಮನೆಯವರಿಗೆ ಏಕೈಕ ಆಧಾರವಾಗಿದ್ದ. ಕೇಶ ಕಸಿ ಬಳಿಕ ತೀವ್ರ ನೋವಿಗೆ ಒಳಗಾಗಿ ರಶೀದ್ ಸಾವಿಗೀಡಾದ್ದಾಗಿ ಆತನ ತಾಯಿ ಅಸಿಯಾ ಬೇಗಂ ಆರೋಪಿಸಿದ್ದಾರೆ. ಕೇಶ ಕಸಿ ಬಳಿಕ ಮೈತುಂಬಾ ದದ್ದಾಗಿದ್ದು, ಈ ಪ್ರಕರಣದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಮಾತ್ರವಲ್ಲ ಯಾವ ತಾಯಿಯೂ ಈ ರೀತಿ ಮಗನನ್ನು ಕಳೆದುಕೊಳ್ಳುವಂತಾಗಬಾರದು, ಕೇಶ ಕಸಿ ಎಂಬುದೇ ಒಂದು ಮೋಸ ಎಂದು ಆರೋಪಿಸಿದ್ದಾರೆ.