ನ್ಯೂಸ್

ವಿದ್ಯುತ್​ ಬಗ್ಗೆ ಎಚ್ಚರ.. ಮೈಮರೆತ ವ್ಯಕ್ತಿ ಕ್ಷಣಾರ್ಧದಲ್ಲಿ ಭಸ್ಮ!

ಬೆಂಗಳೂರು: ತನ್ನ ಮನೆಯ ಮೇಲೆ ಏಣಿ ಹಾಕಿ ಕೆಲಸ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬರಿಗೆ ಆಕಸ್ಮಿಕವಾಗಿ ಏಣಿಗೆ ವಿದ್ಯುತ್​ ಪ್ರವಹಿಸಿ ಕ್ಷಣಾರ್ಧದಲ್ಲಿ ಬೃತಪಟ್ಟಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಆದರೆ ಇದು ಎಲ್ಲಿನದು ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ವೈರಲ್​ ಆಗಿರುವ ಈ ವೀಡಿಯೋದಲ್ಲಿ, ಮಹಡಿಯ ಮೇಲಿನ ಮನೆಯ ಕೊನೆಯಲ್ಲಿ ಏಣಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. ಏಣಿಯನ್ನು ಕೆಳಗಿನಿಂದ ಮೇಲಕ್ಕೆ ಎತ್ತಿಕೊಂಡು ಅದನ್ನು ಸರಿಯಾಗಿ ನಿಲ್ಲಿಸಲು ಯತ್ನಿಸುತ್ತಾರೆ. ಆಗ ಮೇಲೆ ಹಾದುಹೋಗಿದ್ದ ಹೈಟೆನ್ಶನ್ ವಿದ್ಯುತ್ ತಂತಿಗೆ ಏಣಿ ತಗುಲಿದ. ಇದರಿಂದ ತಕ್ಷಣ ವಿದ್ಯುತ್ ಪ್ರವಹಿಸಿ ಅವರ ಮೈಮೇಲೆ ಬೆಂಕಿ ವ್ಯಾಪಿಸಿದೆ. ನೋಡನೋಡುತ್ತಲೇ ಮೇಲಿನಿಂದ ಆ ವ್ಯಕ್ತಿ ಏಣಿಯೊಂದಿಗೆ ಕೆಳಗೆ ಬೀಳುತ್ತಾರೆ.

ಈ ಘಟನೆಯಲ್ಲಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. "ಓಹ್.. ಇದೇನು ವಿಧಿಯ ಟ್ವಿಸ್ಟ್?" ಎಂದು ಕೆಲವರು ಹೇಳಿದರೆ, ಈ ರೀತಿಯ ಸಾವು ಶತ್ರುಗಳಿಗೆ ಸಹ ಬರಬಾರದು" ಎಂದು ಮತ್ತೆ ಕೆಲವರು ಹೇಳಿದರು. ಪ್ರಸ್ತುತ ವೀಡಿಯೊ 4 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.