ನವದೆಹಲಿ: ಇತ್ತೀಚೀಗೆ ಬಿಡುಗಡೆಯಾದ ಅವತಾರ್-2 ಸಿನಿಮಾ ನೋಡಲು ಬಂದ ಪ್ರೇಕ್ಷಕನೊಬ್ಬ ಹೃದಯಾಘಾತದಿಂದ ಥಿಯೇಟರ್ನಲ್ಲೇ ಮೃತಪಟ್ಟ ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದೆ.
ಲಕ್ಷ್ಮೀರೆಡ್ಡಿ ಶ್ರೀನು ಮೃತ ದುರ್ದೈವಿ. ತನ್ನ ಸಹೋದರ ರಾಜು ಜೊತೆ ಅವತಾರ್-2 ಸಿನಿಮಾ ನೋಡಲೆಂದು ಪೆದ್ದಪುರಂನ ಥಿಯೇಟರ್ಗೆ ಆಗಮಿಸಿದ್ದ. ಸಿನಿಮಾ ಅರ್ಧ ಮುಗಿದಿತ್ತು. ಅಷ್ಟರಲ್ಲಿ ಕುಸಿದುಬಿದ್ದ ಲಕ್ಷ್ಮೀರೆಡ್ಡಿ ಶ್ರೀನು, ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಕೂಡಲೇ ಅವರನ್ನ ಪೆದ್ದಪುರಂನ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ತಪಾಸನೆ ನಡೆಸಿದ ವೈದ್ಯರು ಶ್ರೀನು ಬದುಕಿಲ್ಲ ಎಂದು ಘೋಷಿಸಿದರು. ಮೃತನಿಗೆ ಓರ್ವ ಮಗ ಮತ್ತು ಮಗಳು ಇದ್ದಾರೆ.
2010 ರಲ್ಲಿ ಬಿಡುಗಡೆಯಾದ 'ಅವತಾರ್' ಸಿನಿಮಾದ ಮೊದಲ ಭಾಗ ವೀಕ್ಷಿಸುವಾಗ ತೈವಾನ್‌ನಲ್ಲಿ 42 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದರು. ಇದೀಗ ಅವತಾರ್ ಪಾರ್ಟ್ 2 ಸಿನಿಮಾ ವೀಕ್ಷಿಸುವಾಗ ಶ್ರೀನು ಮೃತಪಟ್ಟಿದ್ದಾರೆ.
ದೇಶದಲ್ಲಿ ಹಠಾತ್ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. (ಏಜೆನ್ಸೀಸ್)