ನ್ಯೂಸ್

ಖುರ್ಚಿಯಲ್ಲಿ ಪ್ರಿಯತಮನನ್ನು ಕಟ್ಟಿ ಸೆಕ್ಸ್​ ಮಾಡಲು ಹೋದ ಮಹಿಳೆ; ಕಾಮದಾಸೆಯಲ್ಲೇ ಯಮಲೋಕ ಸೇರಿದ ಯುವಕ

ನಾಗ್ಪುರ: ಕೆಲವರಿಗೆ ಅದೆಷ್ಟು ವಿಚಿತ್ರ ಬಯಕೆಗಳಿರುತ್ತವೆಯೆಂದರೆ, ಅದೇ ಬಯಕೆಗಳಿಂದಾಗಿ ಕೆಲ ಬದುಕೇ ಮುಗಿದುಬಿಡುತ್ತದೆ. ಅದೇ ರೀತಿ ಪ್ರಿಯತಮನೊಂದಿಗೆ ಡಿಫರೆಂಟ್​ ಆಗಿ ಸೆಕ್ಸ್​ ಮಾಡಬೇಕೆಂದುಕೊಂಡ ಮಹಿಳೆಯೊಬ್ಬಳು, ಆತನ ಸಾವಿಗೆ ಕಾರಣವಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಆಕೆಗೆ ಮದುವೆಯಾಗಿ ಒಂದು ಮಗುವಿದೆ. ಗಂಡನೊಂದಿಗೆ ಸುಖವಾಗಿಯೇ ಇದ್ದರು, ಮತ್ತೊಬ್ಬ ಪುರುಷನೊಂದಿಗೆ ಆಕೆ ಅಕ್ರಮ ಸಂಬಂಧ ಹೊಂದಿದ್ದಳು. ಸುಮಾರು ಐದು ವರ್ಷದಿಂದ ಈ ಅಕ್ರಮ ಸಂಬಂಧ ನಡೆಯುತ್ತಿತ್ತು. ಶುಕ್ರವಾರದಂದು ಪ್ರಿಯಕರನೊಂದಿಗಿರುವ ಮನಸ್ಸು ಮಾಡಿದ ಮಹಿಳೆ, ಆತನೊಂದಿಗೆ ಲಾಡ್ಜ್​ ಒಂದಕ್ಕೆ ಹೋಗಿದ್ದಾಳೆ. ಅಲ್ಲಿ ಆತನೊಂದಿಗೆ ಡಿಫರೆಂಟ್​ ಸೆಕ್ಸ್​ ಬಯಕೆ ಹೇಳಿಕೊಂಡಿದ್ದಾಳೆ.

ಡಿಫರೆಂಟ್​ ಸೆಕ್ಸ್​ ಮಾಡಬೇಕೆಂಬ ಬಯಕೆಯಿಂದ, ಪ್ರಿಯಕರನನ್ನು ಖುರ್ಚಿ ಮೇಲೆ ಕೂರಿ, ನೈಲಾನ್​ ಹಗ್ಗದಿಂದ ಆತನ ಕೈ ಕಾಲುಗಳನ್ನು ಕಟ್ಟಿದ್ದಾನೆ. ಸ್ವಲ್ಪ ಜಾಸ್ತಿಯೇ ಥ್ರಿಲ್​ ಇರಲಿ ಎಂದು ಕುತ್ತಿಗೆಯ ಭಾಗದಲ್ಲೂ ಹಗ್ಗ ಕಟ್ಟಿದ್ದಾಳೆ. ಅದಾದ ಮೇಲೆ ಬಾತ್​ರೂಂಗೆ ಹೋಗಿದ್ದಾಳೆ.

ಈ ವೇಳೆ ಖುರ್ಚಿ ಸ್ಲಿಪ್​ ಆಗಿದೆ. ತಕ್ಷಣ ಆತನ ಕುತ್ತಿಗೆಯಲ್ಲಿದ್ದ ಹಗ್ಗ ಸಿಕ್ಕಿ ಹಾಕಿಕೊಂಡು, ಬಿಗಿಯಾಗಿದೆ. ಆತ ತಪ್ಪಿಸಿಕೊಳ್ಳಲೂ ಆಗದೆ ಅಲ್ಲಿಯೇ ನರಳಲಾರಂಭಿಸಿದ್ದಾನೆ. ಬಾತ್​ರೂಂನಿಂದ ಹೊರಗೆ ಬಂದ ಮಹಿಳೆಗೆ ಪ್ರಿಯತಮ ನರಳುತ್ತಿರುವ ದೃಶ್ಯ ಕಂಡುಬಂದಿದೆ. ತಕ್ಷಣ ಲಾಡ್ಜ್​ನ ಸಿಬ್ಬಂದಿಯನ್ನು ಕರೆದು ಸಹಾಯ ಕೇಳಿದ್ದಾಳೆ. ಆತನ ಕುತ್ತಿಗೆಯಲ್ಲಿದ್ದ ಹಗ್ಗವನ್ನು ಬಿಚ್ಚುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದಾನೆ. ತಕ್ಷಣ ಪೊಲೀಸರಿಗೆ ವಿಚಾರ ತಿಳಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಮೃತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. (ಏಜೆನ್ಸೀಸ್​)