ರೈಲಿನಲ್ಲಿ ಗಾಂಜಾ ಸೇದಿದ ಮಹಿಳೆ 
ನ್ಯೂಸ್

VIDEO | ರೈಲಿನಲ್ಲಿ ಗಾಂಜಾ ಸೇದಿದ ಮಹಿಳೆ; ರೈಲ್ವೇ ಇಲಾಖೆ ಸ್ಪಂದಿಸಿದ್ದು ಹೀಗೆ…

ನವದೆಹಲಿ: ಪ್ರಯಾಣಿಕರೊಬ್ಬರು ಕೆಲವು ಮಹಿಳೆಯರು ರೈಲಿನೊಳಗೆ ಗಾಂಜಾ ಮತ್ತು ಸಿಗರೇಟ್​ ಸೇದುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಟಾಟಾನಗರದಿಂದ ಕತಿಹಾರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಟ್ವೀಟ್‌ನಲ್ಲಿ ಅಸನ್ಸೋಲ್​ನಲ್ಲಿ ರೈಲು ಹತ್ತಿದ ಮಹಿಳೆಯರು ಇಡೀ ರಾತ್ರಿ "ಗಾಂಜಾ ಮತ್ತು ಸಿಗರೇಟ್" ಸೇದಿದರು ಎಂದು ದೂರಿದ್ದಾರೆ.

“ಈ ಹುಡುಗಿಯರು ಇಡೀ ರಾತ್ರಿ ಗಾಂಜಾ ಮತ್ತು ಸಿಗರೇಟ್ ಸೇದುತ್ತಿದ್ದಾರೆ. ಅವರು ಅಸನ್ಸೋಲ್‌ನಲ್ಲಿ ರೈಲು ಹತ್ತಿದರು, ”ಎಂದು ಅವರು ಟ್ವೀಟ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ರೈಲ್ವೆ ಸೇವಾ ಅವರು ಪ್ರಯಾಣದ ವಿವರಗಳನ್ನು ಹಂಚಿಕೊಳ್ಳುವಂತೆ ಕೇಳಿಕೊಂಡರು.

“ಸರ್, ದಯವಿಟ್ಟು ನಿಮ್ಮ ಪ್ರಯಾಣದ ವಿವರಗಳನ್ನು (PNR/Train No.) ಮತ್ತು ಮೊಬೈಲ್ ಸಂಖ್ಯೆಯನ್ನು DM ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಲು ನಾವು ವಿನಂತಿಸುತ್ತೇವೆ. ಅಥವಾ ನೀವು ನೇರವಾಗಿ http://railmadad.indianrailways.gov.in ನಲ್ಲಿ ನಿಮ್ಮ ದೂರು ದಾಖಲಿಸಬಹುದು. ಅಥವಾ ತ್ವರಿತ ಪರಿಹಾರಕ್ಕಾಗಿ 139 ಅನ್ನು ಡಯಲ್ ಮಾಡಬಹುದು” ಎಂದು ರೈಲ್ವೆ ಸೇವಾ ಟ್ವೀಟ್ ಮಾಡಿದೆ.