ವಿದ್ಯುತ್ ಕಂಬದಲ್ಲಿ ಸಿಲುಕಿದ್ದ ನಾಯಿಯನ್ನು ರಕ್ಷಿಸಲು ಕಂಬ ಏರಿದ ವ್ಯಕ್ತಿ 
ನ್ಯೂಸ್

ನಾಯಿಯ ಜೀವ ಉಳಿಸಲು ವಿದ್ಯುತ್ ಕಂಬ ಏರಿದ ವ್ಯಕ್ತಿ; ಮಾನವೀಯತೆಗೆ ನೆಟ್ಟಿಗರ ಸಲಾಂ! | Dog Rescue

Dog Rescue: ವಿದ್ಯುತ್ ಕಂಬದ ಮೇಲೆ ಸಿಲುಕಿದ್ದ ನಾಯಿಯನ್ನು ರಕ್ಷಿಸಲು ವ್ಯಕ್ತಿಯೊಬ್ಬರು ತೋರಿದ ಕಾಳಜಿ ಮತ್ತು ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಾಯಿಯನ್ನು ಎಚ್ಚರಿಕೆಯಿಂದ ಕೆಳಗಿಳಿಸಿ ಅದರ ಮಾಲೀಕರಿಗೆ ಒಪ್ಪಿಸಿದ ರಕ್ಷಣಾ ಕಾರ್ಯದ ವಿಡಿಯೋ ಇದೀಗ ವೈರಲ್ ಆಗಿದೆ.

ಮನೆಯ ಮೇಲಿನ ಮಹಡಿಯ ಬಾಲ್ಕನಿಯಿಂದ ಬಿದ್ದು ವಿದ್ಯುತ್ ಕಂಬದ ಬಳಿ ಸಿಲುಕಿಕೊಂಡಿರಬಹುದು ಎಂದು ವರದಿಯಾಗಿದೆ. ಭಯಗೊಂಡಿದ್ದ ನಾಯಿ ಮೇಲೆಯೇ ಉಳಿದುಕೊಂಡಿದ್ದು, ಕೆಳಗೆ ಇಳಿಯಲು ಸಾಧ್ಯವಾಗದೆ ಪರದಾಡುತ್ತಿತ್ತು.

ನಾಯಿಯನ್ನು ರಕ್ಷಿಸಲು ಲೈಟ್​ ಕಂಬ ಏರಿದ ವ್ಯಕ್ತಿ

ಜಾಗೋ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕೆಲವರು ದಾರಿಯಲ್ಲಿ ಕಂಬದ ಮೇಲೆ ಸಿಲುಕಿದ್ದ ನಾಯಿಯನ್ನು ಗಮನಿಸಿದ್ದಾರೆ. ತಕ್ಷಣ ನೆರವಿಗೆ ಧಾವಿಸಿದ ವ್ಯಕ್ತಿಯೊಬ್ಬರು ಬೀದಿ ದೀಪದ ಕಂಬ ಏರಿ ನಾಯಿಯನ್ನು ಎಚ್ಚರಿಕೆಯಿಂದ ಕೆಳಗಿಳಿಸಿದ್ದಾರೆ. ಬಳಿಕ ನಾಯಿಯನ್ನು ಅದರ ಮಾಲೀಕರಿಗೆ ಒಪ್ಪಿಸಿದ್ದು, ರಕ್ಷಣಾ ಕಾರ್ಯ ಸುಖಾಂತ್ಯ ಕಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಈ ಘಟನೆಯ ವಿಡಿಯೋವನ್ನು ಎಕ್ಸ್ ಖಾಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ನಾಯಿಯನ್ನು ರಕ್ಷಿಸಲು ವ್ಯಕ್ತಿ ತೋರಿದ ಧೈರ್ಯ ಮತ್ತು ಕರುಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

'ಮಾನವೀಯತೆ ಅಪರೂಪ, ಆದರೆ ಇನ್ನೂ ಅಳಿದುಹೋಗಿಲ್ಲ' ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು 'ದೇವರು ನಿಮಗೆ ಒಳ್ಳೆಯದು ಮಾಡಲಿ, ಸಹೋದರ' ಎಂದು ವ್ಯಕ್ತಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಪಾಯದಲ್ಲಿದ್ದ ಪ್ರಾಣಿಯೊಂದಕ್ಕೆ ಸಮಯಕ್ಕೆ ಸರಿಯಾಗಿ ನೆರವಾದ ಈ ಕಾರ್ಯ, ಮಾನವೀಯತೆ ಮತ್ತು ಪ್ರಾಣಿಗಳ ಮೇಲಿನ ಕಾಳಜಿಗೆ ಉತ್ತಮ ಉದಾಹರಣೆಯಾಗಿದೆ.

ಇದನ್ನೂ ಓದಿ: ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಎರಡು ಡಾಲ್ಫಿನ್‌ಗಳಿಗೆ ಮರುಜನ್ಮ! ಮೀನುಗಾರರ ಸಮಯಪ್ರಜ್ಞೆಗೆ ನೆಟ್ಟಿಗರ ಸಲಾಂ | Viral Video

ಏನಿದು ಜಾಗೋ ಕಾರ್ಯಕ್ರಮ?

ಜಾಗೋ ಉತ್ತರ ಭಾರತದ, ಅದರಲ್ಲೂ ಪಂಜಾಬ್ ಭಾಗದ ಮದುವೆ ಸಂಪ್ರದಾಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಮದುವೆಯ ಹಿಂದಿನ ರಾತ್ರಿ ನಡೆಯುವ ಈ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಮತ್ತು ನೆರೆಹೊರೆಯವರೊಂದಿಗೆ ಮೆರವಣಿಗೆಯಂತಹ ಆಚರಣೆಗಳು ನಡೆಯುತ್ತವೆ. ಸಾಂಪ್ರದಾಯಿಕ ದೀಪಗಳು ಅಥವಾ ಬಣ್ಣದ ಮಡಕೆಗಳನ್ನು ಹೊತ್ತು ಸಂಭ್ರಮಿಸುವುದು ಈ ಆಚರಣೆಯ ವಿಶೇಷತೆಯಾಗಿದೆ.