ಮುಂಬೈ : ಜನಪ್ರಿಯ ಗಾಯಕ ಸೋನು ನಿಗಮ್ (Sonu Nigam) ಅವರ ಹಾಡು ಎಲ್ಲರಿಗೂ ಅಚ್ಚುಮೆಚ್ಚು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಹಾಡುತ್ತಿರುವ ವೇಳೆ ಮದ್ಯ ವ್ಯಸನಿಯೊಬ್ಬ ಸೋನು ನಿಗಮ್ ಅವರ ಬಳಿ ಬಂದಿದ್ದಾನೆ. ಈ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಡೆದು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತೂರಾಡುತ್ತಾ ವೇದಿಕೆ ಮೇಲೆ ಬಂದ ವ್ಯಕ್ತಿ ಸೋನು ನಿಗಮ್ ಅವರ ಬಳಿ ಬಂದಿದ್ದಾನೆ. ತಕ್ಷಣ ಎಚ್ಚರಿತುಕೊಂಡು ಸೋನು ನಿಗಮ್ (Sonu Nigam) ಹಾಡು ಹಾಡುತ್ತಲೆ ಓಡಿ ಆವ್ಯಕ್ತಯಿಂದ ತಪ್ಪಿಸಿಕೊಂಡಿದ್ದಾರೆ. ಮುಟ್ಟಲು ಬಂದ ಅಪರಿಚಿತ ವ್ಯಕ್ತಿಯಿಂದ ಅದ್ಭುತವಾಗಿ ಪಾರಾಗಿದ್ದು ಎಲ್ಲರ ಗಮನ ಸೆಳೆದಿದೆ. ಕೂಡಲೇ ಎಚ್ಚರಿತುಕೊಂಡ ಸೋನು ನಿಗಮ್ ಅವರ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ತಡೆದು ನಿಲ್ಲಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಾಮೆಂಟ್ ಮಾಡುತ್ತಿದ್ದಾರೆ, ಅದ್ಭುತವಾಗಿ ಹಾಡಿದ್ದೀರಾ ಮತ್ತು ಆ ವ್ಯಕ್ತಿಯಿಂದ ಹೇಗೆ ತಪ್ಪಿಸಿಕೊಂಡಿರಿ? . ಸೋನು ನಿಗಮ್ (Sonu Nigam) ಹಾಡುವುದನ್ನು ನಿಲ್ಲಿಸಿ, ಆ ವ್ಯಕ್ತಿಗೆ ಸಿಬ್ಬಂದಿಗೆ ಹೊಡೆಯುವುದನ್ನು ನಿಲ್ಲಿಸಬೇಕಿತ್ತು. ಅವನನ್ನು ವೇದಿಕೆಯಿಂದ ಹೊರಗೆ ಹಾಕಿದ್ದರೆ ಸಾಕಿತ್ತು, ಅಭಿಮಾನಿಗಳ ಮೇಲೆ ಈ ರೀತಿ ದೈಹಿಕ ನಿಂದನೆ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.