ನ್ಯೂಸ್

ಪ್ರಿಯತಮನ ತೋಳಲ್ಲಿ ಮೈಮರೆತಿದ್ದವಳಿಗೆ ಪತಿ ಕೊಟ್ಟಿದ್ದು ದೊಡ್ಡ ಶಾಕ್​; ಹೋಟೆಲ್​​ನಿಂದ ಪೊಲೀಸ್​ ಸ್ಟೇಶನ್​ಗೆ...!

ಫಾರಿದಾಬಾದ್​: ಮದುವೆಯಾದರೂ ಬೇರೆಯವನ ಸಂಗ ಮುಂದುವರಿಸಿದ್ದ ಮಹಿಳೆಗೆ, ಆಕೆಯ ಪತಿ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹರಿಯಾಣಾದ ಫರಿದಾಬಾದ್​ನಲ್ಲಿ ನಡೆದಿದೆ.

ಸೋಮವಾರ ಹೋಟೆಲ್​​ವೊಂದರಲ್ಲಿ ಪ್ರಿಯತಮನ ತೋಳಿನಲ್ಲಿ ಮೈಮರೆತಿದ್ದವಳಿಗೆ ಪತಿ ಅಕ್ಷರಶಃ ಶಾಕ್​ ನೀಡಿದ್ದಾನೆ. ತನ್ನ ತಮ್ಮನೊಂದಿಗೆ ಬಂದ ಆತ ಇಬ್ಬರನ್ನೂ ರೆಡ್​ಹ್ಯಾಂಡ್ ಹಾಗಿ ಹಿಡಿದು, ಥಳಿಸಿದ್ದಾನೆ.

ವ್ಯಕ್ತಿ ತನ್ನ ತಮ್ಮನೊಂದಿಗೆ ಸೇರಿ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಹೊಡೆಯುವುದನ್ನು ನೋಡಿದ ಜನರೂ ಸೇರಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರಿಗೆ ತನ್ನ ಪತ್ನಿ ಮತ್ತು ಆಕೆಯ ಗೆಳೆಯನ ವಿರುದ್ಧ ದೂರು ನೀಡಿದ್ದಾನೆ. ಸದ್ಯ ಅವರಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಇವರಿಬ್ಬರೂ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆತ ಪಾಲ್ವಾಲ್​ನ ಅಸಾವತಿ ಗ್ರಾಮದವನು. ಆತನ ಪತ್ನಿ ಫಿರೋಜ್​ಪುರ ಕಲಾನ್ ಗ್ರಾಮದವಳು. ಆದರೆ ಆಕೆಗೆ ಮದುವೆಗೂ ಮೊದಲೇ ಬೇರೆಯವನೊಂದಿಗೆ ಸಂಬಂಧ ಇತ್ತು. ಆ ಅನೈತಿಕ ಸಂಬಂಧ ಮದುವೆಯ ನಂತರವೂ ಮುಂದುವರಿದಿತ್ತು. ಹೀಗಾಗಿ ಗಂಡ-ಹೆಂಡತಿ ಮಧ್ಯ ಪದೇಪದೆ ಜಗಳ ನಡೆದಿತ್ತು. ಒಂದೊಮ್ಮೆಯಂತೂ ಆಕೆ ತನ್ನ ಪ್ರಿಯಕರನೊಂದಿಗೆ ನಾಪತ್ತೆಯೂ ಆಗಿದ್ದಳು. ಅದಾದ ಮೇಲೆ ಈ ವ್ಯಕ್ತಿ ಪತ್ನಿಯೊಂದಿಗೆ ಇರುವುದಿಲ್ಲ ಎಂದು ಹೇಳಿದ್ದ. ಆದರೆ ಎರಡೂ ಕುಟುಂಬಗಳು ಕುಳಿತು, ರಾಜಿ ಮಾಡಿಸಿ ಮತ್ತೆ ಒಂದಾಗಿ ಬಾಳುತ್ತಿದ್ದರು. ಇದನ್ನೂ ಓದಿ: ಹೆಂಡ್ತಿ ಜತೆ ಜಗಳವಾಡಿ ಗಂಡ ಹೀಗೆ ಮಾಡೋದಾ? ಪೊಲೀಸರೇ ಕಕ್ಕಾಬಿಕ್ಕಿ

ಆದರೂ ಪತ್ನಿಯ ಚಾಳಿ ಮುಂದುವರಿದಿದ್ದ ಕಾರಣ ಈತ ಒಂದು ಕಣ್ಣಿಟ್ಟಿದ್ದ. ಈಗ ಮೂರು ದಿನಗಳ ಹಿಂದೆ ಮಹಿಳೆ ತವರುಮನೆಗೆ ಹೋಗಿದ್ದಳು. ಕಾಲಿಗೆ ಗಾಯ ಮಾಡಿಕೊಂಡ ತಂದೆಯನ್ನು ನೋಡಲೆಂದು ಹೋಗಿದ್ದಳು. ಹೀಗೆ ಆಕೆಯ ತವರು ಮನೆಗೆ ಕಾಲ್​ ಮಾಡಿದ ಪತಿ, ತನ್ನ ಮಾವನ ಆರೋಗ್ಯ ವಿಚಾರಿಸಿದ್ದಾನೆ. ಹಾಗೇ ಪತ್ನಿಯ ಬಗ್ಗೆಯೂ ಕೇಳಿದ್ದಾನೆ. ಆಗ ಆಕೆ ಶಾಪಿಂಗ್​ಗೆ ಹೋಗಿರುವ ವಿಚಾರ ತಿಳಿದು, ಅನುಮಾನಗೊಂಡು ಕಾರ್ಯಾಚರಣೆಗೆ ಇಳಿದಿದ್ದಾನೆ. ಹೋಟೆಲ್​ವೊಂದರಲ್ಲಿ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.

ಸದ್ಯ ಪೊಲೀಸರು ಮಹಿಳೆ ಮತ್ತು ಆಕೆಯ ಪ್ರಿಯತಮನನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ಇಬ್ಬರ ಕುಟುಂಬದವರನ್ನೂ ಬರುವಂತೆ ಹೇಳಿದ್ದಾರೆ. (ಏಜೆನ್ಸೀಸ್​)