ನ್ಯೂಸ್

ಹೈಕೋರ್ಟ್‌ನ ಆನ್‌ಲೈನ್‌ ವಿಚಾರಣೆಗೆ ಟಾಯ್ಲೆಟ್‌ನಿಂದಲೇ ಅಟೆಂಡ್‌ ಆದ ವ್ಯಕ್ತಿ; Video Viral

Video Viral: ವ್ಯಕ್ತಿಯೊಬ್ಬ ಹೈಕೋರ್ಟ್‌ನ ಆನ್‌ಲೈನ್‌ ವಿಚಾರಣೆಗೆ ಟಾಯ್ಲೆಟ್‌ನಿಂದಲೇ ಅಟೆಂಡ್‌ ಆದ ಘಟನೆ ಗುಜರಾತ್‌ನಲ್ಲಿ ನಡೆದಿದ್ದು, ಇದರ ವಿಡಿಯೋವು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್​ ಆಗಿದೆ.

ಜೂನ್ 20 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾದ ವಿಚಾರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿರ್ಜರ್ ಎಸ್ ದೇಸಾಯಿ ಅವರೊಂದಿಗಿನ ಜೂಮ್ ಸಭೆಯಲ್ಲಿ ಸಮದ್ ಬ್ಯಾಟರಿ ಎಂಬ ವ್ಯಕ್ತಿ, ಇಯರ್‌ಫೋನ್‌ಗಳನ್ನು ಧರಿಸಿ ಟಾಯ್ಲೆಟ್ ಸೀಟಿನಲ್ಲಿ ಕುಳಿತು ವಿಚಾರಣೆಗೆ ಹಾಜರಾಗಿದ್ದಾನೆ.

ಒಂದು ನಿಮಿಷದ ದೀರ್ಘ ವಿಡಿಯೋದಲ್ಲಿ, ಟಾಯ್ಲೆಟ್‌ನ ನೆಲದ ಮೇಲೆ ಮೊಬೈಲ್‌ ಫೋನ್‌ಅನ್ನು ಇರಿಸಿಕೊಂಡಿರುವ ವ್ಯಕ್ತಿ, ತನ್ನನ್ನು ತಾನು ಕ್ಲೀನ್‌ ಮಾಡಿಕೊಳ್ಳುತ್ತಿರುವುದು ಕಂಡಿದೆ. ವಿಚಾರಣೆಯ ಸಮಯದಲ್ಲಿ ನ್ಯಾಯಾಲಯದ ಕೋಣೆಯಲ್ಲಿ ವಕೀಲರು ತಮ್ಮ ವಾದ ಮಂಡಿಸುವುದನ್ನು ವೀಡಿಯೊ ತೋರಿಸುತ್ತದೆ. ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದ ವಿಷಯವನ್ನು ವಿಚಾರಣೆ ನಡೆಸುತ್ತಿತ್ತು.

ಆ ವ್ಯಕ್ತಿ ಕ್ರಿಮಿನಲ್ ಪ್ರಕರಣದಲ್ಲಿ ದೂರುದಾರನಾಗಿದ್ದು, ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಪ್ರಕರಣದಲ್ಲಿ ಪ್ರತಿವಾದಿಯಾಗಿ ಹಾಜರಾಗುತ್ತಿದ್ದನೆಂದು ವರದಿಯಾಗಿದೆ. (ಏಜೆನ್ಸೀಸ್​)