ನ್ಯೂಸ್

ಅಕ್ರಮ ಸಂಬಂಧದ ಅನುಮಾನ; ಪತಿಯಿಂದಲೇ ಮಡದಿ ಮೇಲೆ ಆ್ಯಸಿಡ್​ ದಾಳಿ!

ಮುಂಬೈ: ಅನೇಕ ವರ್ಷಗಳ ಕಾಲ ದಾಂಪತ್ಯ ಜೀವನವನ್ನು ಜತೆಯಾಗಿ ನಡೆಸಿ ವಯಸ್ಸಾದ ಮೇಲೆ ಪತಿ/ಪತ್ನಿ ಮೇಲೆ ಅನುಮಾನ ಪಡುವುದು ಎಂದರೇನು ಅರ್ಥ? ಹೌದು ಇಂತಹ ವಿಚಿತ್ರ ಘಟನೆಯೂ ನಡೆದಿದೆ! ಈ ಘಟನೆ ನಡೆದದ್ದು ಮುಂಬೈನ ಸಿಯಾನ್​ ಎಂಬ ಉಪನಗರದಲ್ಲಿ.

ವಯಸ್ಸಾದರೂ ಮುಗಿಯದ ಸಂಶಯ

ಈ ಭೂಪ ಮುಂಬೈನ ಉಪನಗರ ಸಿಯಾನ್‌ನಲ್ಲಿ 69 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯ ಮೇಲೆ ಆಸಿಡ್ ಎರಚಿರುವ ಬಗ್ಗೆ ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ. ಸೋಮವಾರ ಮುಂಜಾನೆ ಪ್ರತೀಕ್ಷಾನಗರದಲ್ಲಿರುವ ಅವರ ನಿವಾಸದಲ್ಲಿ ನಡೆದ ದಾಳಿಯಲ್ಲಿ 56 ವರ್ಷದ ಮಹಿಳೆ ಮೇಲೆ ಆ್ಯಸಿಡ್​ ದಾಳಿ ಆಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವ ಹೊತ್ತಿಗೆ ಎಂಥಾ ಅನುಮಾನ?

ಆರೋಪಿಯು ತನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದು ಮಧ್ಯರಾತ್ರಿ 1.30 ರ ಸುಮಾರಿಗೆ ದಂಪತಿಗಳು ಜಗಳವಾಡಿದ್ದಾರೆ ಎಂದು ಪೊಲೀಸರು ಹೇಳಿದರು. ಕೋಪದ ಭರದಲ್ಲಿ, ಆರೋಪಿಯು ಆ್ಯಸಿಡ್ ಬಾಟಲಿಯನ್ನು ಹಿಡಿದು ತನ್ನ ಹೆಂಡತಿಯ ಮುಖದ ಮೇಲೆ ಎಸೆದು ಗಾಯಗೊಳಿಸಿದನು ಎಂದು ಅಧಿಕಾರಿ ಹೇಳಿದರು. ಸಂತ್ರಸ್ತೆಯ ಹೇಳಿಕೆ ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)