ನ್ಯೂಸ್

ಮಾರಕ ವೈರಸ್​ ಕೊರೊನಾದಿಂದ ತತ್ತರಿಸಿದ ಚೀನಾದಲ್ಲಿ ಇಂತಹ ಪ್ರಕರಣ: ಮುಂದ ಹ್ಯಾಂಗ ಅನ್ನೋದು ಅಲ್ಲಿನವರ ಪ್ರಶ್ನೆ!

malli

ಹಾಂಗ್​ಕಾಂಗ್​: ಮಾರಕ ವೈರಸ್​ ಕೊರೊನಾದಿಂದಾಗಿ ಇನ್ನು ಏನೇನು ನೋಡಬೇಕೋ ಎಂದು ಚೀನಾದ ಮಂದಿ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ಇಲ್ಲೊಬ್ಬ ಮಾಡಿರುವ ಕೆಲಸವೇ ಹಾಗಿದೆ.

ಕಳೆದ 11 ನೇ ತಾರೀಕಿನಂದು ಒಬ್ಬಾತ ಕಾರಿನ ಗಾಜನ್ನು ಒಡೆದು ಕಳ್ಳತನ ಮಾಡಿಯೇ ಬಿಟ್ಟ.ಸಿಸಿ ಕ್ಯಾಮರಾ ಪರಿಶೀಲಿಸಿರುವ ಪೊಲೀಸರು ಕಳ್ಳತನ ನಡೆದದ್ದು ಸತ್ಯ ಎಂದು ತಿಳಿಸಿದ್ದಾರೆ.

ಅಲ್ಲದೆ ಈ ಕಳ್ಳತನದ ಹಿಂದೆ ಇವನ ಜತೆ ಇನ್ನೊಬ್ಬನ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.ಕಳ್ಳತನ ಮಾಡಿದವನು ಸಿಕ್ಕಿಬಿದ್ದಿದ್ದು ವಾಹನದಿಂದ ಕಳ್ಳತನ ಮಾಡಿದ ಆರೋಪದ ಮೇಲೆ ಅವನನ್ನು ಜೈಲಿಗಟ್ಟಿದ್ದಾರೆ.

ಇಷ್ಟಕ್ಕೂ ಆತ ಕದ್ದಿದ್ದು ಏನು ಗೊತ್ತ. ಕಾರಿನಲ್ಲಿದ್ದ ಮಾಸ್ಕ್​ಗಳನ್ನು! ಅದು ಒಂದಲ್ಲ ಎರಡಲ್ಲ, ಬರೋಬ್ಬರಿ 8 ಬಾಕ್ಸ್​ಗಳನ್ನು. ಆ 8 ಬಾಕ್ಸ್​ನಲ್ಲಿ ಒಟ್ಟು 160 ಮಾಸ್ಕ್​ಗಳಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಯಾನ್​ ಶಿಂಗ್​ ಎಂಬ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮಾಸ್ಕ್​ಗಳನ್ನು ಶೆಯುಂಗ್ ಶೂಯಿ ಎಂಬಾತ ಕದ್ದಿದ್ದಾನೆ.ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬಾತನಿಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)