ಕೊಳ್ಳೇಗಾಲ ಬಸ್ತೀಪುರ ಬಡಾವಣೆಯ ಚಾನೆಲ್ ರಸ್ತೆಯಲ್ಲಿ ಒಣ ಗಾಂಜಾ ಸಾಗಿಸುತ್ತಿದ್ದವನನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ವರ್ಷಾ, ತಖೀವುಲ್ಲಾ, ಬಿಳಿಗೌಡ, ವೆಂಕಟೇಶ್ ಇದ್ದರು. 
ನ್ಯೂಸ್

ಗಾಂಜಾ ಸಾಗಿಸುತ್ತಿದ್ದವನ ಬಂಧನ

ಎಂ.ರವಿ

ಕೊಳ್ಳೇಗಾಲ: ಪಟ್ಟಣದ ಬಸ್ತೀಪುರ ಬಡಾವಣೆಯ ಚಾನೆಲ್ ರಸ್ತೆಯಲ್ಲಿ ಒಣ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ತಿಮ್ಮರಾಜೀಪುರ ಗ್ರಾಮದ ಹರೀಶ ಅಲಿಯಾಸ್ ಹುಚ್ಚಯ್ಯ( 48) ಬಂಧಿತ. ಬಸ್ತೀಪುರ ಬಡಾವಣೆ ಹಿಂಭಾಗವಿರುವ ಚಾನೆಲ್ ರಸ್ತೆಯಲ್ಲಿ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ವರ್ಷಾ ಹಾಗೂ ಉಪವಿಭಾಗ ಅಪರಾಧ ಪತ್ತೆ ದಳ ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಉಪವಿಭಾಗ ಅಪರಾಧ ಪತ್ತೆ ದಳ ಎಎಸ್‌ಐ ತಖೀವುಲ್ಲಾ, ಹೆಡ್ ಕಾನ್‌ಸ್ಟೇಬಲ್ ಬಿಳಿಗೌಡ , ವೆಂಕಟೇಶ್, ಅನಿಲ್‌ಕುಮಾರ್, ರಾಜು ಮತ್ತಿತರರಿದ್ದರು. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.