ನ್ಯೂಸ್

ಬಾರ್​ನಲ್ಲಿ ರಾಮಾಯಣ ವಿಡಿಯೋ ಪ್ಲೇ ಮಾಡಿದ ಭೂಪನ ಬಂಧನ!

ಲಖನೌ: ಇಲ್ಲೊಂದು ಬಾರ್‌ನಲ್ಲಿ ರಾಮಾಯಣ ಧಾರಾವಾಹಿಯನ್ನು ದೊಡ್ಡ ಪರದೆಯಲ್ಲಿ ಪ್ಲೇ ಮಾಡಲಾಗಿದೆ. ಫಲವಾಗಿ ಸಿಕ್ಕಿದ್ದು ಈತನಿಗೆ ಉಚಿತ ಬಂಧನ. ಈ ಘಟನೆ ನೋಯ್ಡಾದಲ್ಲಿ ನಡೆದಿದೆ. ಫಲವಾಗಿ ಸಿಕ್ಕಿದ್ದು ಉಚಿತ ಬಂಧನ. ಈ ಘಟನೆ ನೋಯ್ಡಾದಲ್ಲಿ ನಡೆದಿದೆ.

ರಾಮಾಯಣಕ್ಕೆ ಯಾವ ಮ್ಯೂಸಿಕ್​ ಹಾಕಿದ್ದ ಗೊತ್ತಾ? 

ಈ ಘಟನೆ ಉತ್ತರ ಪ್ರದೇಶದ ನೋಯ್ಡಾದ ಗಾರ್ಡನ್ಸ್ ಗ್ಯಾಲೇರಿಯಾ ಮಾಲ್‍ನಲ್ಲಿರುವ ಲಾರ್ಡ್ ಆಫ್ ದಿ ಡ್ರಿಂಕ್ಸ್ ರೆಸ್ಟೊರೆಂಟ್​ ಕಮ್​ ಬಾರ್​ನಲ್ಲಿ ನಡೆದಿದ್ದು ಶ್ರೀರಾಮ ಹಾಗೂ ರಾವಣನ ಪಾತ್ರಗಳಿಗೆ ಆಧುನಿಕ ಸಂಗೀತವನ್ನು ನೀಡುವ ಮೂಲಕ ಪ್ಲೇ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವೈರಲ್​ ಕೂಡ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದು ಓರ್ವನನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದು "ಘಟನೆಯ ವಿವರ ತಿಳಿದ ತಕ್ಷಣ ಸೆಕ್ಟರ್ 39ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ರೆಸ್ಟೋರೆಂಟ್‍ನ ಮ್ಯಾನೇಜರ್​ನನ್ನು ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದರು.

ಹೇಗೆಲ್ಲಾ ಬಳಸಿದ್ದರು ರಾಮಾಯಣವನ್ನು?

ವಾಸ್ತವವಾಗಿ ಗಾರ್ಡನ್ ಗಲೇರಿಯಾ ಮಾಲ್‌ನ 'ಲಾರ್ಡ್‌ ಆಫ್‌ ಡ್ರಿಂಕ್ಸ್' ಬಾರ್‌ನಲ್ಲಿ ರಾಮ-ರಾವಣ ಯುದ್ಧಕ್ಕೆ ಸಂಬಂಧಿಸಿದ ಡೈಲಾಗ್‌ಗಳನ್ನು ಈ ರೀತಿ ಡಬ್ ಮಾಡಲಾಗುತ್ತಿತ್ತು. ವೇದಿಕೆಯ ಮೇಲಿದ್ದವರು ಕುಣಿದು ಕುಪ್ಪಳಿಸುತ್ತಾ ಮದ್ಯ, ಸಿಗರೇಟು ಊದುತ್ತಾ, ರಾಮ್ ಮತ್ತು ರಾವಣನ ನಡುವಿನ ಸಂಭಾಷಣೆಯ ಸಂಚಿಕೆ ತೆರೆಯ ಮೇಲೆ ನಡೆಯುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ಇದು ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ, ಈ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನ ಹೇಳುತ್ತಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕಾಪಾಡುವಂತೆ ಹಿಂದೂ ಸಂಘಟನೆಯ ಜನರಿಗೆ ಮನವಿ ಮಾಡಲಾಗುತ್ತಿದೆ. ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.