ನ್ಯೂಸ್

ಸ್ನೇಹಿತರಿಂದ ಹೆಂಡತಿಯನ್ನೇ ರೇಪ್​ ಮಾಡಿಸಿದ ಗಂಡ! ಸಾಲದ ಬದಲು ಸೆಕ್ಸ್​ ಎಂದ ಪಾಪಿ

ಚೆನ್ನೈ: ಸ್ನೇಹಿತರಿಂದ ಸಾಲ ಪಡೆದ ವ್ಯಕ್ತಿಯೊಬ್ಬ ಸಾಲ ತೀರಿಸಲಾಗದ ಕಾರಣ, ಸ್ನೇಹಿತರಿಗೆ ತನ್ನ ಹೆಂಡತಿಯನ್ನೇ ರೇಪ್​ ಮಾಡಲು ಅವಕಾಶ ಮಾಡಿಕೊಟ್ಟ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ. ಇದೀಗ ಪಾಪಿ ಪತಿರಾಯನ ಜತೆ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆತ 2018ರಲ್ಲಿ 21 ವರ್ಷದ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಎರಡು ವರ್ಷದ ಮಗನೂ ಇದ್ದಾನೆ. ಕಳೆದ ಒಂದು ವರ್ಷದ ಹಿಂದೆ ಆತ ಕೆಲಸ ಕಳೆದುಕೊಂಡಿದ್ದು, ಬದುಕು ಸಾಗಿಸುವುದಕ್ಕಾಗಿ ಸಾಕಷ್ಟು ಸಾಲ ಮಾಡಿದ್ದಾನೆ. ಆದರೆ ನಿಗದಿತ ಅವಧಿಯಲ್ಲಿ ಸಾಲ ತೀರಿಸಲು ಆಗದ ಅವನನ್ನು ಸಾಲ ಕೊಟ್ಟಿದ್ದ ಸ್ನೇಹಿತರಾದ ಸುಂದರಮೂರ್ತಿ (25) ಮತ್ತು ಮಣಿಕಂದನ್ (26) ಪೀಡಿಸಲಾರಂಭಿಸಿದ್ದಾರೆ. ಅದಕ್ಕೆ ಒಂದು ಉಪಾಯ ಹುಡುಕಿದ ಆತ ಸ್ನೇಹಿತರಿಗೆ ನೀವು ನನ್ನ ಹೆಂಡತಿಯೊಂದಿಗೆ ಸೆಕ್ಸ್​ ಮಾಡಿ, ಅದೇ ನಾನು ನಿಮಗೆ ಸಾಲ ತೀರಿಸುವ ರೀತಿ ಎಂದುಕೊಳ್ಳಿ ಎಂದು ಹೇಳಿದ್ದಾನೆ.

ಸೆಕ್ಸ್​ ಆಫರ್​ಗೆ ಸ್ನೇಹಿತರು ಒಪ್ಪಿದ ನಂತರ ಹೆಂಡತಿಯ ಬಳಿ ಬಂದ ಗಂಡ, ಆಕೆಗೆ ವಿಟಮಿನ್​ ಮಾತ್ರೆಯೆಂದು ಹೇಳಿ ಅಮಲು ಹತ್ತಿಸುವ ಮಾತ್ರೆ ಕೊಟ್ಟಿದ್ದಾನೆ. ಅದನ್ನು ತಿಂದ ಹೆಂಡತಿ ಅಲ್ಲೇ ಅಮಲಿನಲ್ಲಿ ಮಲಗಿದ್ದಾಳೆ. ಈ ವೇಳೆ ಒಬ್ಬ ಸ್ನೇಹಿತನನ್ನು ಕೋಣೆಗೆ ಕಳುಹಿಸಿ ಹೆಂಡತಿಯ ಮೇಲೆ ರೇಪ್​ ಮಾಡಿಸಿದ್ದಾನೆ. ಅದಾದ ಮೇಲೆ ಇನ್ನೊಬ್ಬ ಸ್ನೇಹಿತನೊಂದಿಗೆ ರಾತ್ರಿ ವೇಳೆ ಕಂಠ ಪೂರ್ತಿ ಕುಡಿದು ಬಂದು, ಮಲಗಿದ್ದ ಹೆಂಡತಿಯನ್ನು ರೇಪ್​ ಮಾಡಲು ಹೇಳಿದ್ದಾಳೆ. ಈ ವೇಳೆ ಆಕೆ ಎಚ್ಚರಗೊಂಡಿದ್ದು, ಗಂಡನಿಗೆ ಸರಿಯಾಗಿ ಬಾರಿಸಿದ್ದಾಳೆ. ಮಾರನೇ ದಿನ ಬೆಳಗ್ಗೆಯೇ ಮಗನನ್ನು ಕರೆದುಕೊಂಡು ತವರಿಗೆ ಹೋಗಿದ್ದಾಳೆ. ನಂತರ ಪೊಲೀಸ್​ ಠಾಣೆಯ ಮೆಟ್ಟಿಲೇರಿ ದೂರು ನೀಡಿದ್ದಾಳೆ. ಸದ್ಯ ಈ ಪ್ರಕರಣದಲ್ಲಿ ಮಹಿಳೆಯ ಗಂಡ ಮತ್ತು ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)