ನ್ಯೂಸ್

VIDEO | ಕಾರ್ಮಿಕರೊಂದಿಗೆ ಹಾಡು ಹಾಡುತ್ತ ಕೆಲಸ ಮಾಡಿದ ಸಿಎಂ ಮಮತಾ ಬ್ಯಾನರ್ಜಿ; ವಿಡಿಯೋ ವೈರಲ್!

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಾರ್ಜಲಿಂಗ್ ಟೀ ಎಸ್ಟೇಟ್​ಗೆ ಭೇಟಿ ಕೊಟ್ಟು, ಅಲ್ಲಿನ ಕಾರ್ಮಿಕರೊಂದಿಗೆ ಹಾಡು ಹಾಡಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಡಾರ್ಜಿಲಿಂಗ್‌ನ ಕುರ್ಸಿಯಾಂಗ್‌ನಲ್ಲಿ ಚಹಾ ಎಸ್ಟೇಟ್​ಗೆ ಭೇಟಿ ನೀಡಿದ ಸಿಎಂ ಮಮತಾ, ಟೀ ಎಲೆಗಳನ್ನು ಕೀಳುತ್ತಿದ್ದ ಕಾರ್ಮಿಕರೊಡನೆ ಜತೆಗೂಡಿ ಅವರ ಭಾಷೆಯಲ್ಲೇ ಸಂಭಾಷಣೆ ನಡೆಸಿದರು. ಬಳಿಕ ಹಾಡನ್ನು ಹಾಡುತ ಕೆಲ ಸಮಯ ಕೆಲಸ ಮಾಡಿದ ಅವರು, ನೆರದಿದ್ದ ಸ್ಥಳೀಯರ ಗಮನ ಸೆಳೆದಿದ್ದಾರೆ.

ಸಾಂಪ್ರದಾಯಿಕ ನೇಪಾಳಿ ಉಡುಪಿನಲ್ಲಿ ಕಾಣಿಸಿಕೊಂಡ ಮಮತಾ ಬ್ಯಾನರ್ಜಿ ಚಹಾ ಎಲೆಗಳನ್ನು ಕೀಳುತ್ತ, ಹಾಡು ಹಾಡುತ್ತ ಮಹಿಳೆಯರೊಂದಿಗೆ ತೊಡಗಿದರು. ತದನಂತರ ಮಕೈಬರಿ ಟೀ ಎಸ್ಟೇಟ್‌ನಲ್ಲಿ ಚಹಾ ಸೇವಿಸಿ, ತೆರಳಿದ್ದಾರೆ. ಸದ್ಯ ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ. ಬಂಗಾಳ ಸಿಎಂ ಸರಳತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).