ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾರು ಬುಧವಾರ ಅಪಘಾತಕ್ಕೀಡಾಗಿದ್ದು, ಅವರ ತಲೆ ಮತ್ತು ಹಣೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಅವರು ಬರ್ಧಮಾನ್‌ನಿಂದ ಕೋಲ್ಕತಾಕ್ಕೆ ವಾಪಸ್ ಬರುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ ಎಂದು ಎನ್ನಲಾಗಿದೆ.
ಪ್ರತಿಕೂಲ ಹವಾಮಾನದ ಕಾರಣದಿಂದ ಮಮತಾ ಅವರು ಬರ್ಧಮಾನ್‌ನಿಂದ ಕೋಲ್ಕತಾಗೆ ವಾಪಸಾಗುತ್ತಿದ್ದರು. ಆಗ ಅವರ ಬೆಂಗಾವಲು ವಾಹನದ ಎದುರು ಹಠಾತ್ತಾಗಿ ಕಾರೊಂದು ಬಂದಿತ್ತು. ಹೀಗಾಗಿ ಮಮತಾ ಅವರ ಕಾರು ಚಾಲಕ ತಕ್ಷಣವೇ ಬ್ರೇಕ್ ಹಾಕಿದ್ದಾರೆ. ಇದರಿಂದ ಟಿಎಂಸಿ ನಾಯಕಿಗೆ ಗಾಯಗಳಾಗಿವೆ ಎಂದು ವರಿದಿಯಾಗಿದೆ.
ಮಮತಾ ಅವರ ತಲೆಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಕೋಲ್ಕತಾಗೆ ವಾಪಸ್ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ.