ನಂದಿಗ್ರಾಮ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಸೋಲುಂಟಾಗಿದೆ. ಕೊನೆಯ ಕ್ಷಣದವರೆಗೂ ಗೆಲುವಿನ ಬಗ್ಗೆ ಗೊಂದಲಗಳು ಮೂಡಿದ್ದವು. ಆದರೆ ಅಂತಿಮವಾಗಿ 1737 ಮತಗಳ ಅಂತರದಿಂದ ದೀದಿ ವಿರುದ್ಧ ಸುವೇಂದು ಅಧಿಕಾರಿ ಜಯಶಾಲಿಯಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದೆ.
ಇದಕ್ಕೂ ಪೂರ್ವದಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ 1600 ಮತಗಳ ಅಂತರದಿಂದ ಗೆಲುವಾಗಿದೆ ಎಂದೇ ಬಿಂಬಿಸಲಾಗಿತ್ತು.
ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಖುದ್ದು ಮಾತನಾಡಿದ ದೀದಿ, ತನಗೆ ಸೋಲುಂಟಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದು ನನಗಾದ ಹಿನ್ನಡೆಯಲ್ಲ. ಜನಾಭಿಪ್ರಾಯವನ್ನು ಒಪ್ಪುತ್ತೇನೆ ಎಂದು ಹೇಳಿದ್ದಾರೆ. ಸದ್ಯ ನಾನು ಕೋವಿಡ್ ಇರುವುದರಿಂದ ಪ್ರಮಾಣವಚನ ತೆಗೆದುಕೊಳ್ಳುವುದಿಲ್ಲ ಎಂದಿದ್ಧಾರೆ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 200 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಲೀಡ್ ಸಾಧಿಸಿದೆ. ಬಿಜೆಪಿ 80 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.