ನ್ಯೂಸ್

ಮಲ್ನಾಡ್ ರೌಂಡ್ ಟೇಬಲ್ ನಿಂದ ಮ್ಯಾರಥಾನ್, ಸೈಕ್ಲಿಂಗ್ ಸ್ಪರ್ಧೆ 25ಕ್ಕೆ

ಶಿವಮೊಗ್ಗ: ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ 266 ಮತ್ತು ರಾಯಲ್ ಇಂದ್ರಪ್ರಸ್ಥ ಬಿಲ್ಡರ್ಸ್‌ನಿಂದ ‘ನಂಜಪ್ಪ ಮೈಲ್ಸ್ ಆಫ್ ಹೋಮ್: ರೈಡ್, ರನ್, ರೀಚ್ ಲೈವ್ಸ್’ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಸ್ಪ್ಪರ್ಧೆಯನ್ನು ಮೇ 25ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ 266ರ ಚೇರ್ಮನ್ ರೋಹನ್ ಹೇಳಿದರು.

ಸಮುದಾಯದ ಆರೋಗ್ಯ ಜಾಗೃತಿ ಮತ್ತು ಸಾಮಾಜಿಕ ಸೇವೆ ಉದ್ದೇಶವನ್ನು ಒಂದೇ ವೇದಿಕೆಯಲ್ಲಿ ನಡೆಸಲಾಗುವುದು. ಕಾರ್ಯಕ್ರಮದಿಂದ ಸಿಗುವ ಸಂಪೂರ್ಣ ಧನಸಹಾಯವನ್ನು ಸೂಳೆಬೈಲು ಸರ್ಕಾರಿ ಪ್ರೌಢಶಾಲೆಯಯಲ್ಲಿ ಮೂರು ಕೊಠಡಿ ನಿರ್ಮಿಸಲು ಬಳಸಲಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿವಮೊಗ್ಗ ಮತ್ತು ದಾವಣಗೆರೆ ನಂಜಪ್ಪ ಆಸ್ಪತ್ರೆ, ಸಾಗರ ರಸ್ತೆಯ ನಂಜಪ್ಪ ಲೈಫ್‌ಕೇರ್ ಮತ್ತು ರಾಯಲ್ ಇಂದ್ರಪ್ರಸ್ಥ ಬಿಲ್ಡರ್ಸ್ ಪ್ರಾಯೋಜಕತ್ವ, ಪಾನಕ ಗೋಲಿ ಸೋಡಾ, ಟಿವಿಎಸ್ ಆರ್ಯಾ ಮೋಟಾರ್ಸ್‌, ಶಲೋಕ್ ಗ್ಯಾಸ್ ಏಜೆನ್ಸಿ ಮತು ್ತ ಟಂಬಲ್ ಡ್ರೈ ಸಹ ಪ್ರಾಯೋಜಕತ್ವದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು.

ಭಾರತದಲ್ಲಿ 7,500ಕ್ಕೂ ಹೆಚ್ಚು ಕೊಠಡಿಗಳನ್ನು ಈಗಾಗಲೇ ನಿರ್ಮಿಸಿದ್ದು, ಪ್ರಸಕ್ತ ವರ್ಷ ಸೂಳೆಬೈಲ್ ಸರ್ಕಾರಿ ಹೈಸ್ಕೂಲ್‌ನಲ್ಲಿ ಮೂರು ಕೊಠಡಿಗಳ ಬ್ಲಾಕ್ ನಿರ್ಮಾಣ ಮಾಡಲಾಗುತ್ತಿದೆ. 8 ಕಿ.ಮೀ. ಓಟದ ಸ್ಪರ್ಧೆ ಮತ್ತು 22 ಕಿ.ಮೀ. ಕ್ರಾಸ್‌ಕಂಟ್ರಿ ಸೈಕ್ಲಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 6ರಿಂದ 13 ವರ್ಷದೊಳಗಿನ ಮಕ್ಕಳಿಗೆ 4 ಕಿ.ಮೀ. ಓಟದ ಸ್ಪರ್ಧೆ, 13 ವರ್ಷ ಮೇಲ್ಪಟ್ಟವರಿಗೆ 8 ಕಿ.ಮೀ. ಓಟದ ಸ್ಪರ್ಧೆ ಹಾಗೂ 13 ವರ್ಷ ಮೇಲ್ಪಟ್ಟವರಿಗೆ 22 ಕಿ.ಮೀ. ಕ್ರಾಸ್‌ಕಂಟ್ರಿ ಸೈಕ್ಲ್ಲಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರಥಮ ಬಹುಮಾನ ತಲಾ 5 ಸಾವಿರ ರೂ., ದ್ವಿತೀಯ ಬಹುಮಾನ ತಲಾ 3 ಸಾವಿರ ರೂ. ಇರಲಿದೆ. ಅನುಪಿನಕಟ್ಟೆಯ ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ನಿಂದ ಸ್ಪರ್ಧೆ ಪ್ರಾರಂಭಗೊಳ್ಳಲಿದೆ ಎಂದರು. ಎಸ್.ಆರ್.ಆದರ್ಶ, ಸ್ಕಂದ, ರಘನಂದನ್, ಮಧುಪ್ರಕಾಶ್, ನವೀನ್ ಸುದ್ದಿಗೋಷ್ಠಿಯಲ್ಲಿದ್ದರು.