ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ( Mallikarjun Kharge ) ಅವರು ಇಂದು ಭಾಷಣ ಮಾಡುತ್ತಿರುವಾಗಲೇ ವೇದಿಕೆ ಮೇಲೆ ಅಸ್ವಸ್ಥಗೊಂಡಿದ್ದಾರೆ. ಈ ಕುರಿತಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜಮ್ಮು- ಕಾಶ್ಮೀರದ ಕಥುವಾದಲ್ಲಿ ಈ ಘಟನೆ ನಡೆದಿದೆ.
ಜಮ್ಮು- ಕಾಶ್ಮೀರದ ಕಥುವಾದಲ್ಲಿ ಇಂದು ಮಲ್ಲಿಕಾರ್ಜುನ್ ಖರ್ಗೆ ಅವರು ಜಮ್ಮು ಕಾಶ್ಮೀರದ ಚುನಾವಣೆ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆ ಭಾಷಣ ಮಾಡುತ್ತಿದ್ದಾಗ ಗಂಟಲು ಕಟ್ಟಿಕೊಂಡಿದೆ. ಮಾತನಾಡಲು ಸಾಧ್ಯವಾಗದೆ ಇದ್ದರು. ನಿಂತುಕೊಳ್ಳಲು ಸಾಧ್ಯವಾಗದೇ ಇದ್ದಾಗ ಅಲ್ಲೇ ವೇದಿಕೆ ಮೇಲೆ ಜತೆಗೆ ಇದ್ದವರು ಬಂದು ಮಲ್ಲಿಕಾರ್ಜುನ್ ಖರ್ಗೆ ಅವರ ಕೈ ಹಿಡಿದುಕೊಂಡು ಸಹಾಯ ಮಾಡುತ್ತಾರೆ.
ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕುಡಿಲು ನೀರು ಕೊಟ್ಟು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಯಿತ್ತು. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.