ಕೇರಳ: ಹೃದಯಾಘಾತದಿಂದ ನಟಿ ಲಕ್ಷ್ಮೀಕಾ ಸಜೀವನ್ (27) ಸಾವನ್ನಪ್ಪಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಟಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.
ಕೇರಳದ ಪಲ್ಲುರುಟಿ ಕಚೇರಿಪಾಡಿ ವಜವೇಲಿ ಪ್ರದೇಶದವರಾದ ಲಕ್ಷ್ಮಿಕಾ ಶಾರ್ಜಾದ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಲಕ್ಷ್ಮಿಕಾ ಸಾವನ್ನಪ್ಪಿರುವುದು ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಲಕ್ಷ್ಮಿಕಾ ಸಜೀವನ್ ಅವರ ನಿಧನದ ಸುದ್ದಿ ಕೇಳಿ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಲಕ್ಷ್ಮಿಕಾ ಕಾಲಕಾಲಕ್ಕೆ ಇನ್ಸ್ಟಾಗ್ರಾಮ್ ನಲ್ಲಿ ಇಂಟ್ರೆಸ್ಟಿಂಗ್ ಪೋಸ್ಟ್ ಗಳನ್ನು ಹಾಕುತ್ತಿರುತ್ತಾರೆ.'ಹೋಪ್.. ಲೈಟ್ ಡಿಸಪಾಯಿಂಟ್ಮೆಂಟ್ ಆಲ್ ಆಫ್ ದಿ ಡಾರ್ಕ್ನೆಸ್' ಎಂಬ ಶೀರ್ಷಿಕೆಯೊಂದಿಗೆ ಸೂರ್ಯ ಮುಳುಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾಳೆ. ಈ ಪೋಸ್ಟ್ ಮಾಡಿದ ಒಂದು ವಾರದಲ್ಲಿ ನಿಧನರಾದರು.
‘ಕಾಕ್ಕ’ ಕಿರುಚಿತ್ರದಲ್ಲಿ ಪಂಚಮಿಯಾಗಿ ನಟಿಸಿ ಪ್ರೇಕ್ಷಕರಿಗೆ ಹತ್ತಿರವಾದರು. ಕಾಕ್ಕ ತನ್ನ ಬಣ್ಣದ ಕಾರಣದಿಂದ ಮನೆಯವರಿಂದ ತಿರಸ್ಕರಿಸಲ್ಪಟ್ಟ ಹುಡುಗಿಯ ಕಥೆ. ಇದರಲ್ಲಿನ ಅಭಿನಯಕ್ಕಾಗಿ ಲಕ್ಷ್ಮೀಕಾ ಪ್ರಶಂಸೆಯನ್ನು ಪಡೆದರು. ಆ ನಂತರ ಕೆಲವು ಚಿತ್ರಗಳಲ್ಲಿ ನಟಿಸಿದಳು.
ಸೌದಿ ವೆಳ್ಳಕ್ಕ.. ಪಂಚವರ್ಣತಾತ.. ಪೂಜಯಮ್ಮ.. ಉಯರೆ.. ಒರು ಕುಟ್ಟನಾಥಕ್ ಬ್ಲಾಕ್ ಮತ್ತು ನಿತ್ಯಹರಿತಾ ನಾಯಗನ್ ಮುಂತಾದ ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿದ್ದಾಳೆ.