ನ್ಯೂಸ್

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಟ ವಿಜಯ್​​ ಬಾಬು ಬಂಧನ

ಕೊಚ್ಚಿನ್​: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಮಲಯಾಳಂ ನಟ ಮತ್ತು ನಿರ್ಮಾಪಕ ವಿಜಯ್ ಬಾಬು ಅವರನ್ನು ಸೋಮವಾರ ಬಂಧಿಸಲಾಗಿದೆ.

ವಿಚಾರಣೆಗೆಂದು ಎರ್ನಾಕುಲಂ ಸೌತ್ ಪೊಲೀಸ್ ಠಾಣೆಗೆ ಹಾಜರುಪಡಿಸಿದ ವೇಳೆ ವಿಜಯ್ ಬಾಬು ಅವರನ್ನು ಬಂಧಿಸಲಾಯಿತು. ಜೂನ್ 22ರಂದು ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು.

ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸುವ ವೇಳೆ ಕೇರಳ ಹೈಕೋರ್ಟ್, ರಾಜ್ಯವನ್ನು ತೊರೆಯದಂತೆ ಮತ್ತು ಅವರ ಪಾಸ್‌ಪೋರ್ಟ್ ಸಲ್ಲಿಸುವಂತೆ ಹೇಳಿದೆ.

ಸೋಮವಾರದಿಂದ ಜುಲೈ 3ರವರೆಗೆ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿಚಾರಣೆ ನಡೆಸಲು ತನಿಖಾ ತಂಡಕ್ಕೆ ಅನುಮತಿ ನೀಡಲಾಗಿದೆ. ನಿನ್ನೆ, ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ಅವರಿಗೆ ಬೆಂಬಲವನ್ನು ನೀಡಿತು.

ಮಹಿಳೆಯೊಬ್ಬರು ನಟನ ವಿರುದ್ಧ ಈ ಆರೋಪ ಮಾಡಿದ್ದು, ಏಪ್ರಿಲ್ ತಿಂಗಳಲ್ಲೇ ದುಬೈ ತೆರಳುವ ವೇಳೆಯೇ ಈ ಆರೋಪ ಕೇಳಿಬಂದಿತ್ತು. (ಏಜೆನ್ಸೀಸ್​)