ನ್ಯೂಸ್

ಹೃದಯಾಘಾತದಿಂದ ಮಾಲಿವುಡ್​ನ ಖ್ಯಾತ ನಟ ನಿರ್ಮಲ್​ ಬೆನ್ನಿ ನಿಧನ

ತಿರುವನಂತಪುರಂ: ಮಲಯಾಳಂ ಚಿತರಂಗದ ಖ್ಯಾತ ನಟ ನಿರ್ಮಲ್​ ಬೆನ್ನಿ ಅವರು ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ 37 ವರ್ಷ ವಯಸ್ಸಾಗಿತ್ತು.

ನಿರ್ಮಲ್​ ಅವರ ಸಾವಿನ ಸುದ್ದಿಯನ್ನು ಅವರ ಆಪ್ತ ಸ್ನೇಹಿತ, ನಿರ್ಮಾಪಕ ಸಂಜಯ್​ ಪಡಿಯೂರ್​ ಖಚಿತಪಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಂದಹಾಗೆ, 2012ರಲ್ಲಿ ನಿರ್ಮಲ್ ಚಿತ್ರರಂಗಕ್ಕೆ ಕಾಲಿಟ್ಟರು. ನವಗತರ್ಕ್ ಸ್ವಾಗತಂ, ಅಮೆನ್ ಚಿತ್ರದಲ್ಲಿನ ಕೊಚ್ಚನ ಹೆಸರಿನ ಪಾತ್ರ ಮಾಡಿ ಗಮನ ಸೆಳೆದಿದ್ದರು. ಚಿತ್ರಗಳಲ್ಲಿ ಮಾತ್ರವಲ್ಲದೇ ಜನಪ್ರಿಯ ಯೂಟ್ಯೂಬ್ ವೀಡಿಯೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಿರ್ಮಲ್ ಅವರು ಹೆಚ್ಚು ಖ್ಯಾತಿ ಪಡೆದಿದ್ದರು. ಅವರ ನಿಧನಕ್ಕೆ ಮಾಲಿವುಡ್​ ಸಂತಾಪ ಸೂಚಿಸಿದ್ದು, ಖ್ಯಾತ ನಟ, ನಟಿಯರು ಈ ಬಗ್ಗೆ ಪೋಸ್ಟ್​ ಮಾಡಿದ್ದಾರೆ.