ನ್ಯೂಸ್

ಬೆಳ್ಳಂಬೆಳಗ್ಗೆ ಖ್ಯಾತ ನಟ ಅರೆಸ್ಟ್! ಈತನ ಮಾಜಿ ಪತ್ನಿ ನೀಡಿದ ದೂರೇನು ಗೊತ್ತಾ? Actor Arrested

ಕೇರಳ: ಮಲಯಾಳಂ ನಟ ಬಾಲ ( actor bala ) ಅವರನ್ನು ಕೇರಳ ಪೊಲೀಸರು ( Actor Arrested) ಬಂಧಿಸಿದ್ದಾರೆ. ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ಇಂದು ಬೆಳಗ್ಗೆ ಕಡವಂತರಾ ಪೊಲೀಸರು ಬಾಲಾ ಮತ್ತು ಈತನ ಮ್ಯಾನೇಜರ್​ ರಾಜೇಶ್​​ ಅವರನ್ನು ಕೊಚ್ಚಿಯಲ್ಲಿರುವ ಮನೆಯಿಂದ ಬಂಧಿಸಿದ್ದಾರೆ.

ನಟನ ಮ್ಯಾನೇಜರ್ ರಾಜೇಶ್ ಮತ್ತು ಮತ್ತೊಬ್ಬ ಆರೋಪಿ ಅನಂತಕೃಷ್ಣನ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಿಂದನೆ ಮತ್ತು ಕಿರುಕುಳ ನೀಡಿದ ಆರೋಪ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಬಾಲಾ ಮತ್ತು ಅವರ ಮಾಜಿ ಪತ್ನಿ ಅಮೃತಾ ಸುರೇಶ್ ನಡುವಿನ ಭಿನ್ನಾಭಿಪ್ರಾಯ ಉಂಟಾಗಿದೆ. ಅಮೃತಾ ತನ್ನ ಮದುವೆಯ ಸಂದರ್ಭದಲ್ಲಿ ಎದುರಿಸಿದ ಕೌಟುಂಬಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ್ದರು. ನಟನ ಬಳಿ ನಾನು ಕೆಲಸ ಮಾಡುವಾಗ ತನ್ನ ಹೆಂಡತಿಯೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ನೋಡಿದ್ದೇನೆ ಎಂದು ಅಮೃತಾರ ಮಾಜಿ ಡ್ರೈವರ್ ಗಂಭೀರ ಆರೋಪ ಮಾಡಿದ್ದಾರೆ

ಮಹಿಳೆಯನ್ನು ಅವಮಾನಿಸಿದ್ದಕ್ಕಾಗಿ ಐಪಿಸಿಯ 354 ಸೆಕ್ಷನ್‌ ಹಾಗೂ ಇನ್ನಿತರ ಕೆಲವು ಆರೋಪ ಹಿನ್ನೆಲೆಯಲ್ಲಿ ನಟನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.