ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ( Malaika Arora ) ರೆಸ್ಟೋರೆಂಟ್ ಬಳಿ ಎಡವಿದ್ದಾರೆ. ಸ್ನೇಹಿತನ ಸಹಾಯದಿಂದ ತಮ್ಮನ್ನು ಸಂಭಾಳಿಸಿಕೊಂಡ ನಟಿ ಮುಂದೆ ನಡೆದಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಟಿಗೆ ತಮಾಷೆ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
ಮಲೈಕಾ ಹಾಗೂ ಅವರ ಸ್ನೇಹಿತರು ರೆಸ್ಟೋರೆಂಟ್ಗೆ ಬಂದಿದ್ದರು. ಅಲ್ಲಿ ಮಲೈಕಾ ಕಾಲು ಎಡವಿದೆ. ಕೆಳಗೆ ಬೀಳ್ತಿದ್ದ ಅವರನ್ನು ಸ್ನೇಹಿತರು ಹಿಡಿದುಕೊಳ್ತಾರೆ. ಪಾಪರಾಜಿಗಳು ಫೋಟೋ, ವಿಡಿಯೋ ಕ್ಲಿಕ್ಕಿಸ್ತಿದ್ರೆ ಮಲೈಕೆ ತಲೆ ಬಗ್ಗಿಸಿಕೊಂಡು ಒಳಗೆ ಹೋಗ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕುಡಿದಿದ್ದು ಜಾಸ್ತಿ ಆಗಿದ್ಯಾ? ಮಲೈಕಾಗೆ, ಅರ್ಜುನ್ ಮರೆಯಲು ಆಗ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ತುಂಬಾ ಸಿಂಪಲ್ ಡ್ರೆಸ್ ನಲ್ಲಿ ಬಂದಿದ್ದ ಮಲೈಕಾ, ಖಾಕಿ ಪ್ಯಾಂಟ್‌ನೊಂದಿಗೆ ಬಿಳಿ ಕ್ರಾಪ್ ಟಾಪ್ ಧರಿಸಿದ್ದರು ಮಲೈಕಾ. ಅವರು ತಮ್ಮ ಕೂದಲನ್ನು ಸಿಂಪಲ್ ಆಗಿ ಕಟ್ಟಿದ್ದು, ಕಡಿಮೆ ಮೇಕಪ್ ಮಾಡಿದ್ರು. ಕೈನಲ್ಲೊಂದು ಬ್ಯಾಗ್ ಹಿಡಿದಿದ್ದ ಮಲೈಕಾ, ಸರಳವಾಗಿದ್ರೂ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಮಲೈಕಾ ಕೈ ಹಿಡಿದಿರುವ ವ್ಯಕ್ತಿ ಯಾರು? ಇನ್ನೊಬ್ಬರ ಜೊತೆ ಮಲೈಕಾ ಡೇಟ್ ಮಾಡ್ತಿದ್ದಾರಾ ಎಂಬ ಪ್ರಶ್ನೆಯನ್ನೂ ನೆಟ್ಟಿಗರು ಕೇಳಿದ್ದಾರೆ.
ಸಿನಿಮಾಗಳಿಂದ ದೂರವಿರುವ ಮಲೈಕಾ, ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡ್ತಾರೆ. ಮಲೈಕಾ ಅರೋರಾ, ಅರ್ಬಾಜ್ ಖಾನ್ (Arbaaz Khan) ಗೆ ವಿಚ್ಛೇದನ ನೀಡಿದ ನಂತ್ರ 5 ವರ್ಷಗಳ ಕಾಲ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡಿದ್ದರು. ಇದೀಗ ಈ ಜೋಡಿ ದೂರವಾಗಿದ್ದಾರೆ.