ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇಗುಲದಲ್ಲಿ ವಿಹಿಂಪ ಕಾರ್ಯಕರ್ತರು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ನಡೆಸಿದರು. ಆರ್.ಡಿ.ಮಹೇಂದ್ರ, ಉಮೇಶ್, ಮಹೇಶ್ಚಂದ್ರ ಇತರರಿದ್ದರು.  
ನ್ಯೂಸ್

22ರಂದು ಕಾರ್ಯಕ್ರಮ ಯಶಸ್ವಿಗೊಳಿಸಿ

ಶಿವಕುಮಾರ ಎಸ್.ಪಿ.

ಬಾಳೆಹೊನ್ನೂರು: ಅಯೋಧ್ಯೆಯಲ್ಲಿ ನಡೆಯಲಿರುವ ಬಾಲರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮವನ್ನು ರಾಮಭಕ್ತರು ಯಶಸ್ವಿಗೊಳಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಹೇಳಿದರು.

ಪಟ್ಟಣದ ಮಾರ್ಕಾಂಡೇಶ್ವರ ದೇಗುಲದಲ್ಲಿ ಭಾನುವಾರ ಏರ್ಪಡಿಸಿದ್ದ ವಿಹಿಂಪ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮಾರ್ಕಾಂಡೇಶ್ವರ ದೇವಾಲಯದ ಆವರಣದಲ್ಲಿ 22ರಂದು ಬೆಳಗ್ಗೆ 8ರಿಂದ ರಾಮತಾರಕ ಹೋಮವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಸಲಾಗುವುದು. ಯಜ್ಞ ಪೂರ್ಣಾಹುತಿ ಬಳಿಕ ರಾಮ ಭಜನೆ, ಎಲ್‌ಇಡಿ ಪರದೆಯಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ. ಸಂಘಟನೆಯ ಹಿರಿಯರು ಮಾತನಾಡುವರು. ಮಧ್ಯಾಹ್ನ ರಾಮಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಜೆ ಎಲ್ಲ ಹಿಂದು ಬಾಂಧವರು ಮನೆಗಳ ಮುಂದೆ ಐದು ಹಣತೆಗಳನ್ನು ಉತ್ತರಾಭಿಮುಖವಾಗಿ ಬೆಳಗಿಸಿ ರಾಮಮಂದಿರ ಉದ್ಘಾಟನೆ, ಪ್ರಾಣಪ್ರತಿಷ್ಠಾಪನೆಯ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಉಮೇಶ್, ಆರ್‌ಎಸ್‌ಎಸ್ ಜಿಲ್ಲಾ ವ್ಯವಸ್ಥಾಪಕ ಪ್ರಮುಖ್ ಮಹೇಶ್ಚಂದ್ರ, ತಾಲೂಕು ಶಾರೀರಿಕ ಪ್ರಮುಖ್ ಅರುಣ್, ರಾಮಮಂದಿರ ಉದ್ಘಾಟನಾ ಅಭಿಯಾನದ ತಾಲೂಕು ಸಂಯೋಜಕ ಬಿ.ವೆಂಕಟೇಶ್ ಇತರರಿದ್ದರು.