ಸಾಗರದಲ್ಲಿ ಆತ್ಮನಿರ್ಭರ ಕಾರ್ಯಕ್ರಮದಡಿ ಬೀದಿಬದಿ ವ್ಯಾಪಾರಿಗಳಿಗೆ ಸಾಲಪತ್ರ ವಿತರಿಸಲಾಯಿತು. ಗೋಪಾಲಕೃಷ್ಣ ಬೇಳೂರು, ಗಣಪತಿ ಮಂಡಗಳಲೆ, ಲಲಿತಮ್ಮ, ಉಮೇಶ್, ಸೈಯದ್ ಜಾಕೀರ್, ಶ್ರೀಕಾಂತ್ ಇತರರಿದ್ದರು. 
ನ್ಯೂಸ್

ಆತ್ಮನಿರ್ಭರ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

ಸಾಗರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಉದ್ದೇಶ ಬಡತನ ನಿವಾರಣೆ. ಕೇಂದ್ರ ಸರ್ಕಾರ ಕೆಲವು ಯೋಜನೆಗಳನ್ನು ಜಾರಿಗೆ ತಂದಿದ್ದರೆ, ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ 1.22 ಕೋಟಿ ಕುಟುಂಬಗಳಿಗೆ ಸ್ವಾಭಿಮಾನದ ಬದುಕು ನಡೆಸಲು ಮುನ್ನುಡಿ ಬರೆದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರಸಭೆ ರಂಗಮಂದಿರದಲ್ಲಿ ಮಂಗಳವಾರ ಕೌಶಲಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಮತ್ತು ನಗರಸಭೆಯಿಂದ ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಕಾರ್ಯಕ್ರಮದಡಿ ಲಾನುಭವಿಗಳಿಗೆ ಸಾಲಪತ್ರ ವಿತರಿಸಿ ಮಾತನಾಡಿದರು.

ಸರ್ಕಾರದ ಯೋಜನೆಗಳು ಅರ್ಹ ಲಾನುಭವಿಗಳಿಗೆ ತಲುಪಿ, ಅವರ ಬದುಕು ಹಸನಾಗಬೇಕು. ಬೀದಿಬದಿ ವ್ಯಾಪಾರಿಗಳು ತಮ್ಮ ಉದ್ಯಮವನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದಲ್ಲಿ ಉನ್ನತ ಹುದ್ದೆಗೆ ಹೋಗುವಂತೆ ವೇದಿಕೆ ರೂಪಿಸಬೇಕು ಎಂದು ತಿಳಿಸಿದರು.

ಬೀದಿಬದಿ ವ್ಯಾಪಾರಿಗಳಿಗೆ ಕನಿಷ್ಠ 10 ಲಕ್ಷ ರೂ. ವಿಮಾ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಇಲಾಖೆ ಚಿಂತನೆ ನಡೆಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಲು ಸೂಚನೆ ನೀಡಿದರೂ ಕೆಲವು ಬ್ಯಾಂಕ್‌ಗಳು ಅಲೆದಾಡಿಸುತ್ತಿವೆ. ಇದನ್ನು ಸಹಿಸುವುದಿಲ್ಲ. ಬೀದಿಬದಿ ವ್ಯಾಪಾರಿಗಳಿಗೆ ನಗರದ ನಾಲ್ಕು ದಿಕ್ಕುಗಳಲ್ಲಿ ಸುಸಜ್ಜಿತ ುಡ್‌ಕೋರ್ಟ್ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ಪಡೆದ ಸಾಲವನ್ನು ನಿಗದಿತ ಸಮಯದೊಳಗೆ ಮರುಪಾವತಿಸಿ ಹೆಚ್ಚಿನ ಸಾಲ ಪಡೆಯಲು ಗಮನಹರಿಸಬೇಕು. ಸುಮಾರು 95 ಲಕ್ಷ ರೂ. ವೆಚ್ಚದಲ್ಲಿ ುಡ್ ಕೋರ್ಟ್ ನಿರ್ಮಿಸಲು ಹಣ ಮೀಸಲಿಡಲಾಗಿದೆ. ಪ್ರಥಮ ಹಂತದಲ್ಲಿ 70 ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಲಲಿತಮ್ಮ, ಉಮೇಶ್, ಸೈಯದ್ ಜಾಕೀರ್, ಹಮೀದ್, ರವಿ ಲಿಂಗನಮಕ್ಕಿ, ಕೆನರಾ ಬ್ಯಾಂಕ್‌ನ ಶ್ರೀಕಾಂತ್, ಜಿಲ್ಲಾ ಸ್ವನಿಧಿ ಕಾರ್ಯಕ್ರಮಾಧಿಕಾರಿ ಸುರೇಶ್, ಶಿಲ್ಪಾ, ಭವ್ಯಾ ಕೃಷ್ಣಮೂರ್ತಿ, ಹಮೀದ್ ಖಾನ್ ಇತರರಿದ್ದರು.