ನ್ಯೂಸ್

ಸಂಜೆಯ ತಿಂಡಿಗಾಗಿ ಮಾಡಿ ರುಚಿಯಾದ ಆಲೂ ಕಟ್ಲೇಟ್​ | Recipe

ಭಾನುಪ್ರಿಯ ಡಿ.ಕೆ

Recipe: ಇಂದಿನ ದಿನಗಳಲ್ಲಿ ಸಂಜೆಯಾದ ತಕ್ಷಣ ಅನೇಕರು ರುಚಿಯಾದ ಆಹಾರಗಳನ್ನು ತಿನ್ನಲು ಬಯಸುತ್ತಾರೆ. ಹಾಗೆಯೇ ಬೋಂಡಾ, ಮಿರ್ಚಿ, ಪಿಜ್ಜಾ, ಬರ್ಗರ್​ನಂತಹ ಆಹಾರಗಳನ್ನು ತಿಂದು ಬೇಜಾರಾಗಿದ್ದರೆ. ಈ ರೀತಿಯ ಆಲೂ ರೆಸಿಪಿ ಮಾಡಿ ಸೇವಿಸಿ...

ಬೇಕಾಗುವ ಪದಾರ್ಥಗಳು

* 2 ಆಲೂಗಡ್ಡೆ

* 1 ಕಪ್​ ಈರುಳ್ಳಿ

* ಸ್ವಲ್ಪ ಕರಿಬೇವು

* ಶುಂಠಿ ಪೇಸ್ಟ್​

* ಕೊತ್ತುಂಬರಿ ಸೊಪ್ಪು

* 1 ಚಮಚ ಖಾರದ ಪುಡಿ

* 1/4 ಚಮಚ ಪೆಪ್ಪರ್​ ಪುಡಿ

* ಎಣ್ಣೆ

* ಉಪ್ಪು

ಮಾಡುವ ವಿಧಾನ

ಆಲೂಗಡ್ಡೆಯನ್ನು ತೆಗೆದುಕೊಳ್ಳಿ ಅದನ್ನು ತುರಿದು ಚೆನ್ನಾಗಿ ತೊಳೆದು ಅದರಲ್ಲಿರುವ ನೀರನ್ನು ಹಿಂಡಿ ಉದುರು ಉದುರಾಗಿಟ್ಟುಕೊಳ್ಳಿ. ನಂತರ ಒಂದು ಬಟ್ಟಲಿಗೆ ತುರಿದ ಆಲೂಗಡ್ಡೆ, ಈರುಳ್ಳಿ, ಕರಿಬೇವು, ಮೆಣಸಿನಕಾಯಿ, ಶುಂಠಿ, ಉಪ್ಪು, ಕೊತ್ತಂಬರಿ ಸೊಪ್ಪು, ಅಕ್ಕಿಹಿಟ್ಟು, ಕಡ್ಲೆಹಿಟ್ಟು, ಖಾರದ ಪುಡಿ, ಪೆಪ್ಪರ್​ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದಕ್ಕೆ ಮಾಡಿದ ಮಿಶ್ರಣವನ್ನು ತಟ್ಟಿ ಬಂಗಾರದ ಬಣ್ಣ ಬರುವವರೆಗೂ ಬೇಯಿಸಿರಿ. (ಏಜೆನ್ಸೀಸ್​)