ಮತ್ತೆ ಕಲ್ಯಾಣ ಸುಧೆ ಮಾಸಾಚರಣೆಯ ಸಮಾರೋಪದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಯನಾ ಮೋಟಮ್ಮ, ಸೂರಿ ಶ್ರೀನಿವಾಸ್, ಜಯಶೀಲಾ ಇತರರಿದ್ದರು.  
ನ್ಯೂಸ್

ಮಕ್ಕಳಿಗೆ ಸಂಸ್ಕೃತಿಯ ಅರಿವು ಮೂಡಿಸಿ

ಶಿವಕುಮಾರ ಎಸ್.ಪಿ.

ಆಲ್ದೂರು: ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಸಾಪ ಉತ್ತಮ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣ ಮೂಲಕವೂ ಈ ಕಾರ್ಯ ನಡೆಯಬೇಕು ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾ, ತಾಲೂಕು ಹೋಬಳಿ ಘಟಕಗಳ ಸಹಯೋಗದೊಂದಿಗೆ ಕಾಫಿ ಬೆಳೆಗಾರ ಸಿ.ಸುರೇಶ್ ಅವರ ಮನೆ ಅಂಗಳದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರಾವಣ ಸಂಭ್ರಮದಲ್ಲಿ ಮತ್ತೆ ಕಲ್ಯಾಣ ಸಾಹಿತ್ಯ ಸುಧೆ ಮಾಸಾಚರಣೆ ಸಮಾರೋಪದಲ್ಲಿ ಮಾತನಾಡಿದರು.
ಮಕ್ಕಳ ಅಭಿರುಚಿಗೆ ತಕ್ಕಂತೆ ಸಾಹಿತ್ಯವನ್ನು ಪರಿಚಯಿಸಿ ಪ್ರೋತ್ಸಾಹಿಸಬೇಕು. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮೂಲಕ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಸಂತಸದ ವಿಚಾರ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ವಚನ ಸಾಹಿತ್ಯದಲ್ಲಿ ಕೃಷಿ ಕಾಯಕಲ್ಪ ಕುರಿತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರುಶೇಖರ್ ನಾರಾಣಪುರ ಮಾತನಾಡಿ, ಪುರಾತನವಾಗಿ ಅನೇಕ ನೆಲೆಗಟ್ಟು ರೂಪಿಸಿಕೊಂಡು ಬಂದ ದೇಶ ಭಾರತ. ಸ್ವಾತಂತ್ಯ ಪೂರ್ವ ಜಾನಪದ ಸೃಷ್ಟಿಯಾಯಿತು. ವಚನ ಸಾಹಿತ್ಯ, ದಾಸ ಸಾಹಿತ್ಯ ಸೃಷ್ಟಿಯಾದವು ಎಂದರು.
ಆಲ್ದೂರು ಗ್ರಾಪಂ ಅಧ್ಯಕ್ಷೆ ಜಯಶೀಲಾ ಚಿದಂಬರ ಮಾತನಾಡಿ, ಮಕ್ಕಳ ಮನಸ್ಸನ್ನು ಅರಳಿಸಿ ಪ್ರತಿಭೆ ಅನಾವರಣಗೊಳಿಸುವ ಕೆಲಸವನ್ನು ಸಾಹಿತ್ಯ ಪರಿಷತ್ ಮಾಡಬೇಕು ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಬಿಸ್ಲೇಹಳ್ಳಿ ಸೋಮಶೇಖರ್ ಮಾತನಾಡಿದರು. ಆಲ್ದೂರು ಹೋಬಳಿ ಘಟಕದ ಅಧ್ಯಕ್ಷ ನೂರ್ ಮಹಮ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ತಾಲೂಕು ಅಧ್ಯಕ್ಷೆ ಪುಷ್ಟಾವತಿ, ಖಜಾಂಚಿ ರಾಣಿ ಮಂಜುಳಾ ದೇವಿ, ಪ್ರಧಾನ ಸಂಚಾಲಕ ಗುರುವೇಶ್, ಕಾಫಿ ಬೆಳೆಗಾರರಾದ ಸುರೇಶ್, ಗ್ರಾಪಂ ಅಧ್ಯಕ್ಷೆ ಪದ್ಮಾವತಿ, ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜ್, ಗ್ರಾಪಂ ಸದಸ್ಯರು, ಶಾಲೆಯ ಮಕ್ಕಳು ಉಪಸ್ಥಿತರಿದ್ದರು.