Recipe: ಮಳೆಗಾಲದ ಸಮಯದಲ್ಲಿ ಮಾನ್ಸೂನ್ ಹನಿಗಳು ಕಿಟಕಿ ಮೇಲೆ ಬೀಳುತ್ತಿದ್ದಂತೆಯೇ ಏನಾದರೂ ತಿನ್ನಬೇಕೆಂಬ ಹಂಬಲ ಜಾಸ್ತಿಯಾಗುತ್ತದೆ. ಅಂತಹ ಸಮಯದಲ್ಲಿ ರುಚಿ ರುಚಿಯಾದ ಆಲುಗಡ್ಡೆ ಭಜಿಗಳು ಮತ್ತು ಪಕೋಡಗಳು ಯಾವಾಗಲೂ ಮಾಡುತ್ತಿರುತ್ತೇವೆ. ಈ ಬಾರಿ ಸಂಜೆಯ ತಿಂಡಿಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿ, ಈ ರೆಗ್ಯುಲರ್ ಖಾದ್ಯವನ್ನು ಹೊರತು ಪಡಿಸಿ ಗರಂಗರಂ ಆದ ಸ್ಕ್ವಿಡ್ ಕಟ್ಲೇಟ್ ಒಮ್ಮೆ ಟ್ರೈಮಾಡಿ...
*ಸ್ಕ್ವಿಡ್ ಮೀನು
* ಹುರಿಯಲು ಎಣ್ಣೆ
* ಬ್ರೆಡ್ ಚೂರುಗಳು
* 1 ಈರುಳ್ಳಿ
* ಕೊತ್ತಂಬರಿ ಸೊಪ್ಪು
* ಗರಂ ಮಸಾಲ
* ಅರಿಶಿನ ಪುಡಿ
* ಉಪ್ಪು
* ಮೆಣಸಿನ ಪುಡಿ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್
* 1 ಮೊಟ್ಟೆ
ಮೊದಲು ಸ್ಕ್ವಿಡ್ ಮೀನನ್ನು ಅದರ ತಲೆ, ಚರ್ಮ ತೆಗೆದು ಸ್ವಚ್ಚಗೊಳಿಸಿ ಬಿಸಿ ನೀರಿನಿಂದ ಚೆನ್ನಾಗಿ ತೊಳೆಯಬೇಕು. ನಂತರ ಒಂದು ಪಾತ್ರೆಯಲ್ಲಿ ನೀರು ಮತ್ತು ಚಿಟಿಕೆ ಉಪ್ಪು ಬೆರೆಸಿ, ಚೆನ್ನಾಗಿ ಕುದಿಸಿ ನಂತರ, ಒಂದು ಮಿಕ್ಸರ್ ಬಳಸಿ ಪೇಸ್ಟ್ ಆಗಿ ಪುಡಿ, ನಂತರ ಬ್ರೆಡ್ಗಳನ್ನು ತೆಗೆದುಕೊಂಡು ಚಿಕ್ಕ ಚಿಕ್ಕ ಪುಡಿಗಳನ್ನಾಗಿ ಮಾಡಬೇಕು. ಒಂದು ಬಟ್ಟಲಿನಲ್ಲಿ ಸ್ಕ್ವೀಡ್ ಪೇಸ್ಟ್ ಮತ್ತು ಬ್ರೆಡ್ ತುಂಡುಗಳನ್ನು ಸೇರಿಸಿ, ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಮೆಣಸಿನ ಪುಡಿ, ಉಪ್ಪು ಮತ್ತು ಗರಂ ಮಸಾಲ ಪುಡಿಗಳನ್ನು ಸೇರಿಸಬೇಕು. ನಂತರ ಒಂದು ಮೊಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಸೇರಿಸಿ ಗಟ್ಟಿ ಮಿಶ್ರಣ ಮಾಡಬೇಕು. ಮಿಶ್ರಣದ ಸಣ್ಣ ಭಾಗಗಳನ್ನು ತೆಗೆದುಕೊಂಡು ಅವುಗಳನ್ನು ಕಟ್ಲೇಟ್ ಆಕಾರದಲ್ಲಿ ಚಪ್ಪಟೆ ಮಾಡಿ, ಬ್ರೆಡ್ ತುಂಡುಗಳಿಂದ ಲೇಪಿಸಬೇಕು. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಈ ಕಟ್ಲೇಟ್ಗಳನ್ನು ಕಂದು ಬಣ್ಣ ಬರುವವರೆಗೂ ಡೀಪ್ ಫ್ರೈ ಮಾಡಿ. ಸ್ವಲ್ಪ ತಣ್ಣಗಾದ ನಂತರ ಸೇವಿಸಿ.(ಏಜೆನ್ಸೀಸ್)