ನ್ಯೂಸ್

ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸಿ; ಕೇಂದ್ರಕ್ಕೆ ಸಂಸದೀಯ ಸಮಿತಿ ಶಿಫಾರಸು

Bengaluru - General - Rama Kishan K V

ನವದೆಹಲಿ: ಮದುವೆಯ ಪಾವಿತ್ರ್ಯತೆ ರಕ್ಷಿಸಲು ವ್ಯಭಿಚಾರವನ್ನು ಅಪರಾಧ ಎಂದು ಘೋಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿಯು ಮಂಗಳವಾರ ಶಿಾರಸು ಮಾಡಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್​ 497 ಉಳಿಸಿಕೊಳ್ಳಬೇಕು. ವ್ಯಭಿಚಾರ ಕಾನೂನನ್ನು ಲಿಂಗ ತಟಸ್ಥ ಅಪರಾಧ ಎಂದು ಪರಿಗಣಿಸಬೇಕು. ಅಲ್ಲದೆ. ಪುರುಷ ಮತ್ತು ಮಹಿಳೆ ಸಮಾನ ಜವಾಬ್ದಾರಿ ಹೊಂದಿರಬೇಕು ಎಂದು ಸಮಿತಿ ವಾದಿಸಿದೆ.

ಕಳೆದ ಸೆಪ್ಟೆಂಬರ್​ನಲ್ಲಿ ನಡೆದ ಸಂಸತ್​ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಭಾರತೀಯ ನ್ಯಾಯ ಸಂಹಿತಾ ಮಸೂದ ಮಂಡಿಸಿದ್ದರು. ಈ ಮಸೂದೆಯು ದಂಡ ಸಂಹಿತೆ, ಕ್ರಿಮಿನಲ್​ ಪೊಸಿಜರ್​ ಕೋಡ್​ ಮತ್ತು ಭಾರತೀಯ ಸ್ಯಾ ಸಂಹಿತೆಯನ್ನು ತಿದ್ದುಪಡಿ ಮಾಡುವ ಭಾಗವಾಗಿದೆ. ಮಸೂದೆಯನ್ನು ಪರಿಗಣಿಸಿದ ನಂತರ ಬಿಜೆಪಿ ಸಂಸದ ಬ್ರಿಜ್​ ಲಾಲ್​ ಅವರು ಅಧ್ಯರಾಗಿದ್ದ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು ತನ್ನ ಶಿಫಾರಸನ್ನು ಸರ್ಕಾರಕ್ಕೆ ಕಳುಹಿಸಿದೆ.

ಸಮಿತಿ ಸಲ್ಲಿಸಿರುವ ಶಿಾರಸಿಗೆ ಕಾಂಗ್ರೆಸ್​ ಹಿರಿಯ ನಾಯಕ ಪಿ.ಚಿದಂಬರಂ ಅವರು, ದಂಪತಿಗಳ ಜೀವನದಲ್ಲಿ ಪ್ರವೇಶಿಸಲು ಯಾರಿಗೂ ಯಾವುದೇ ಹಕ್ಕಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಮಸೂದೆಗೆ ಮೂರು ಮೂಲಭೂತ ಆೇಪಣೆಗಳನ್ನು ಎತ್ತಿದ್ದಾರೆ. ಈ ಎಲ್ಲ ಮೂರು ಮಸೂದೆಗಳು ಅಸ್ತಿತ್ವದಲ್ಲಿರುವ ಕಾನೂನುಗಳ ಕಾಪಿ ಮತ್ತು ಪೇಸ್ಟ್​ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್​ ತೀರ್ಪಿಗೆ ವಿರುದ್ಧ ಈ ಶಿಫಾರಸು

ಸಂಸದರ ಸಮಿತಿಯ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಅದು ಸುಪ್ರೀಂ ಕೊರ್ಟ್​ ತೀರ್ಪಿಗೆ ವಿರುದ್ಧವಾಗುತ್ತದೆ. 2018ರಲ್ಲಿ ಐವರು ನ್ಯಾಯಮೂರ್ತಿಗಳ ಪೀಠವು ವಿವಾಹೇತರ ಸಂಬಂಧ ಅಪರಾಧವಲ್ಲ ಮತ್ತು ಅಪರಾಧವಾಗಬಾರದು ಎಂದು ತೀರ್ಪು ನೀಡಿತ್ತು. ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ನೇತೃತ್ವದ ಪೀಠವು ವಿಚ್ಛೇದನಕ್ಕಾಗಿ ವಿವಾಹೇತರ ಸಂಬಂಧವು ಸಿವಿಲ್​ ಅಪರಾಧವಾಗಬಹುದು. ಆದರೆ, ಇದು ಕ್ರಿಮಿನಲ್​ ಅಪರಾಧವಾಗಲು ಸಾಧ್ಯವಿಲ್ಲ ಎಂದು ಹೇಳಿತ್ತು. 163 ವರ್ಷ ಹಳೆಯದಾದ, ವಸಾಹತುಶಾಹಿ ಯುಗದ ಕಾನೂನು ಪತಿಯು ಪತ್ನಿಯ ಯಜಮಾನ ಎಂಬ ಅಮಾನ್ಯ ಪರಿಕಲ್ಪನೆಯನ್ನು ಅನುಸರಿಸುತ್ತದೆ ಎಂದು ನ್ಯಾಯಾಲಯವು ತರ್ಕಿಸಿತ್ತು. ಇದು ಅನಿಯಂತ್ರಿತ ಮತ್ತು ಪಿತೃಪ್ರಧಾನವಾಗಿದೆ. ಮಹಿಳೆಯ ಸ್ವಾಯತ್ತತೆ, ನತೆ ಮತ್ತು ಖಾಸಗಿತನವನ್ನು ಉಲ್ಲಂಸುತ್ತದೆ ಎಂದು ಪೀಠವು ಹೇಳಿತ್ತು.