ನ್ಯೂಸ್

ವಿಡಿಯೋ ಕಾಲ್​ ಮಾಡಿ ಅಶ್ಲೀಲ ದೃಶ್ಯ ಪ್ರದರ್ಶನ; ನಿವೃತ್ತ ಅಧಿಕಾರಿಗಳೇ ಟಾರ್ಗೆಟ್​!

ಬೆಂಗಳೂರು: ಸ್ಮಾರ್ಟ್​ಫೋನ್​ ಬಳಕೆದಾರರೇ ಎಚ್ಚರ. ಸೈಬರ್​ ಕಳ್ಳರು ಹೊಸ ಮೋಸದ ಅಸ್ತ್ರ ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ ಬಲೆ ಬೀಸುತ್ತಿದ್ದಾರೆ. ಚಪಲಕ್ಕೆ ಅಶ್ಲೀಲ ವಿಡಿಯೋ ನೋಡಿದರೆ ಸಾಕು ಅದನ್ನೇ ಅಸ್ತ್ರವಾಗಿಟ್ಟುಕೊಂಡು ಬ್ಲ್ಯಾಕ್​​​ಮೇಲ್​ ಮಾಡಿ ಹಣ ಪೀಕುತ್ತಿದ್ದಾರೆ ಹುಷಾರ್​.

ಅದರಲ್ಲಿಯೂ ಇತ್ತೀಚೆಗೆ ನಿವೃತ್ತ ನೌಕರರು ಮತ್ತು ವೃದ್ಧರನ್ನೇ ಟಾರ್ಗೆಟ್​ ಮಾಡುತ್ತಿದ್ದಾರೆ. ೇಸ್​ಬುಕ್​, ಟ್ವಿಟರ್​, ಇನ್​ಸ್ಟ್ರಾಗ್ರಾಂನಲ್ಲಿ ಫ್ರೆಂಡ್​​ ರಿಕ್ವೆಸ್ಟ್​ ಕಳುಹಿಸಿ ಅಥವಾ ನೇರವಾಗಿ ವಾಟ್ಸ್​ಆ್ಯಪ್​ನಲ್ಲಿ ವಿಡಿಯೋ ಕಾಲ್​ ಮಾಡಿ ಯುವತಿಯರು ಸ್ನೇಹ ಬಯಸುತ್ತಾರೆ.

ವಿಡಿಯೋ ಕಾಲ್​ ಮಾಡಿ ಸಂಭಾಷಣೆಗೆ ಎಳೆದು ತಡರಾತ್ರಿ ಏಕಾಏಕಿ ಬೆತ್ತಲೆ ದೃಶ್ಯ ತೋರಿಸುತ್ತಾರೆ. ಚಪಲಕ್ಕೆ ಸ್ವಲ್ಪ ಕಣ್ಣಾಡಿಸಿದರೂ ಸಾಕು ಸೈಬರ್​ ಖದೀಮರು, ವಿಡಿಯೋ ಕಾಲ್​ನ ಸ್ಕ್ರೀನ್​ ಶಾರ್ಟ್​ ಅಥವಾ ವಿಡಿಯೋ ರೆಕಾರ್ಡ್​ ಮಾಡಿಕೊಳ್ಳುತ್ತಾರೆ. ಒಂದೆಡೆ ಕರೆ ಸ್ವೀಕರಿಸಿದವರ ಫೋಟೋ ಜತೆಗೆ ಕರೆ ಮಾಡಿದವರ ಬೆತ್ತಲೆ ಪೋಟೋ ಸಹ ಸೆರೆಯಾಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಮೋಸಗಾರರು ಕರೆ ಸ್ವೀಕರಿಸಿದವರ ವ್ಯಕ್ತಿಯ ವಾಟ್ಸ್​ಆ್ಯಪ್​ಗೆ ಅಶ್ಲೀಲ ಫೋಟೋವನ್ನು ಕಳುಹಿಸಿ ಬ್ಲ್ಯಾಕ್​​ಮೇಲ್​ಗೆ ಇಳಿಯುತ್ತಾರೆ. ಫೋನ್​​ ಪೇ, ಗೂಗಲ್​ ಪೇ ಅಥವಾ ನೆಟ್​ ಬ್ಯಾಂಕಿಂಗ್​ನಲ್ಲಿ ಹಣ ಸುಲಿಗೆ ಮಾಡುತ್ತಾರೆ. ಇಲ್ಲವಾದರೆ, ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರ ಫೇಸ್​​ಬುಕ್​ ಖಾತೆಗೆ ಟ್ಯಾಗ್​ ಮಾಡುತ್ತೇವೆ ಅಥವಾ ವಾಟ್ಸ್​ಆ್ಯಪ್​ಗೆ ಫೋಟೋ ಕಳುಹಿಸಿ ನನ್ನ ಬೆತ್ತಲೆ ದೃಶ್ಯ ತೋರಿಸಿ ಮರ್ಯಾದೆ ತೆಗೆಯುತ್ತೆನೆ ಎಂದು ಬ್ಲ್ಯಾಕ್​​ಮೇಲ್​ ಮಾಡಿ ಸುಲಿಗೆ ಮಾಡುತ್ತಿದ್ದಾರೆ.

ಬ್ಲ್ಯಾಕ್​​​ಮೇಲ್​ ಪ್ರಕರಣ ಹೆಚ್ಚಳ:
ನಗರದಲ್ಲಿ ದಿನೇದಿನೆ ಬ್ಲ್ಯಾಕ್​​​ಮೇಲ್ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಜಯನಗರದ ಆರ್​ಪಿಸಿ ಲೇಔಟ್​ನಲ್ಲಿ ವಾಸವಾಗಿರುವ ನಿವೃತ್ತ ಅಧಿಕಾರಿ, ಮೋಸದ ಜಾಲಕ್ಕೆ ಸಿಲುಕಿ 6.95 ಲಕ್ಷ ರೂ. ಕಳೆದುಕೊಂಡಿದ್ದಾರೆ. ನ.20ರಂದು ನಿವೃತ್ತ ಅಧಿಕಾರಿಯ ವಾಟ್ಸ್​ಆ್ಯಪ್​ಗೆ ಅಂಕಿತಾ ಗುಪ್ತಾ ಎಂಬಾಕೆ ಮಧ್ಯಾಹ್ನ 2 ಗಂಟೆಗೆ ವಿಡಿಯೋ ಕಾಲ್​ ಮಾಡಿದ್ದಾಳೆ. ಕರೆ ಸ್ವೀಕರಿಸಿದಾಗ ಆ ಕಡೆಯಿಂದ ನಗ್ನವಾದ ವಿಡಿಯೋ ಕಂಡಿದೆ.

ಈ ಎಲ್ಲ ದೃಶ್ಯಾವಳಿಯನ್ನು ಸೈಬರ್​ ಕಳ್ಳರು ರೆಕಾರ್ಡ್​ ಮಾಡಿಕೊಂಡು ವಿಡಿಯೋ ಎಡಿಟ್​ ಮಾಡಿದ್ದಾರೆ. ಎರಡು ದಿನ ಬಿಟ್ಟು ನಿವೃತ್ತ ಅಧಿಕಾರಿಗೆ ಕರೆ ಮಾಡಿದ ಅಪರಿಚಿತ, ಹಣಕ್ಕೆ ಬೇಡಿಕೆ ಒಡ್ಡಿದ್ದಾನೆ. ಹಣ ಕೊಡದಿದ್ದರೇ ಯುವತಿ ಜತೆಗೆ ಅಶ್ಲೀಲ ವಿಡಿಯೋ ನೋಡಿರುವುದನ್ನು ಜಾಲತಾಣದಲ್ಲಿ ಅಪ್​ಲೋಡ್​ ಮಾಡಿ ಮರ್ಯಾದೆ ತೆಗೆಯುವುದಾಗಿ ಹೇಳಿ ಹಂತ ಹಂತವಾಗಿ 6.95 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಮತ್ತೆ ಮತ್ತೆ ಹಣಕ್ಕೆ ಬ್ಲಾ$್ಯಕ್​ಮೇಲ್​ ಮಾಡಿದಾಗ ನೊಂದ ನಿವೃತ್ತ ಅಧಿಕಾರಿ, ಪಶ್ಚಿಮ ವಿಭಾಗ ಸಿಇಎನ್​ ಠಾಣೆಗೆ ದೂರು ನೀಡಿದ್ದಾರೆ. ಇದರ ಮೇರೆಗೆ ಆರೋಪಿಗಳಾದ ಆಕಾಶ್​ಕುಮಾರ್​ ವರ್ಮಾ, ವಿಜಯಕುಮಾರ್​, ಅಲೋಕ್​ ವರ್ಮಾ ಮತ್ತು ಅಂಕಿತ್​ ಗುಪ್ತಾ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


ಸೈಬರ್​ ಕೆಂ ಪೊಲೀಸರ ಟಿಪ್ಸ್​

  • ಫೇಸ್​ಬುಕ್​, ಟ್ವಿಟರ್​, ಇನ್​ಸ್ಟ್ರಾಗ್ರಾಂ ಖಾತೆ ಪ್ರೊಫೈಲ್​ ಲಾಕ್​ ಮಾಡಿ
  • ಪರಿಚಿತರ ಜತೆ ಸ್ನೇಹ, ಅಪರಿಚಿತರ ಗೆಳೆತನದಿಂದ ದೂರ ಇರುವುದು ಒಳಿತು
  • ಅನಗತ್ಯವಾಗಿ ಮೊಬೈಲ್​ ನಂಬರ್​, ವೈಯಕ್ತಿಕ ವಿಚಾರ ಹಂಚಿಕೊಳ್ಳದೆ ಇರುವುದು
  • ಅಪರಿಚಿತ ನಂಬರ್​ನಿಂದ ವಿಡಿಯೋ ಕಾಲ್​ ಬಂದಾಗ ಎಚ್ಚರಿಕೆ ವಹಿಸುವುದು
  • ಅನಾಮಧೇಯ ವಿಡಿಯೋ ಕಾಲ್​ ಬಂದಾಗ ಮೊಬೈಲ್​ ಹಿಂಬದಿ ಕ್ಯಾಮರಾ ಆನ್​ ಮಾಡಿ
  • ಜಾಲತಾಣದಲ್ಲಿ ಫೋಟೋ, ಮೊಬೈಲ್​ ಅಪ್​ಲೋಡ್​ ಮಾಡುವುದು ಸುರತ
  • ಅಶ್ಲೀಲ ವಿಡಿಯೋ, ಫೋಟೋ ನೋಡುವುದು, ಚಾಟಿಂಗ್​ನಿಂದ ದೂರು ಉಳಿಯಿರಿ
  • ಹಣ ವಸೂಲಿಗೆ ಬ್ಲ್ಯಾಕ್​​​ಮೇಲ್ ಮಾಡಿದರೆ ಸೈಬರ್​ ಕ್ರೈಂ ಠಾಣೆಗೆ ದೂರು ನೀಡಿ