ಕೋಲಾರ ಹಾಲು ಒಕ್ಕೂಟದ ಚುನಾವಣೆಯ ಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ರಾಜಕೀಯ ಪಕ್ಷಗಳ ಕಾರ್ಯಕತರು ಶಾಸಕರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದರು. 
ನ್ಯೂಸ್

ಕೋಮುಲ್​ ಚುನಾವಣೆಯಲ್ಲಿ ಕೈಗೆ ಬಹುಮತ

ಕಿರುವಾರ ಎಸ್.ಸುದರ್ಶನ್

ಕೋಲಾರ: ತೀವ್ರ ಜಿದ್ದಾಜಿದ್ದಿ ನಡುವೆ ನಡೆದ ಕೋಲಾರ ಹಾಲು ಸಹಕಾರ ಸಂಗಳ ಒಕ್ಕೂಟದ (ಕೋಮುಲ್​) ನಿರ್ದೇಶಕ ಸ್ಥಾನದ ಚುನಾವಣೆಯ ಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್​ಗೆ ಸಿಹಿ ಆಗಿದ್ದರೆ, ಜೆಡಿಎಸ್​-ಬಿಜೆಪಿಗೆ ಮೈತ್ರಿಗೆ ಕಹಿಯಾದಂತಾಗಿದೆ.

ಒಟ್ಟು 13 ಸ್ಥಾನಗಳ ಪೈಕಿ ಜಿಲ್ಲೆಯ ಮಾಲೂರು ತಾಲೂಕು ಟೇಕಲ್​ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಸಕ ಕೆ.ವೈ.ನಂಜೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, 12 ಸ್ಥಾನಕ್ಕೆ ಚುನಾವಣೆ ನಡೆಯಿತು. ಆ ಪೈಕಿ 9 ಮಂದಿ ಕಾಂಗ್ರೆಸ್​ ಬೆಂಬಲಿತ ನಿರ್ದೇಶಕರು ಹಾಗೂ 4 ಮಂದಿ ಎನ್​ಡಿಎ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಕಾಂಗ್ರೆಸ್​ಗೆ ಮತದಾರರು ಬಹುಮತ ನೀಡಿದ್ದಾರೆ.

ಕಾಂಗ್ರೆಸ್​ ಶಾಸಕರಾದ ಬಂಗಾರಪೇಟೆ ಎಸ್​.ಎನ್​.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ ಸೇರಿ ಮಾಜಿ ನಿರ್ದೇಶಕರು ಕಣದಲ್ಲಿದ್ದರು. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್​&ಎನ್​ಡಿಎ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ನಡೆಯಿತಾದರೂ ಮೂರು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಇರಲಿಲ್ಲ. ಅಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳ ನಡುವೆಯೇ ಸ್ಪರ್ಧೆ ಏರ್ಪಟ್ಟಿತ್ತು.

13 ನಿರ್ದೇಶಕರ ಪೈಕಿ ಶ್ರೀನಿವಾಸಪುರ ಇಬ್ಬರು, ಕೋಲಾರ, ಬಂಗಾರಪೇಟೆ, ಕೆಜಿಎ್​ ತಲಾ ಒಬ್ಬರು, ಮಾಲೂರು 2, ಮಹಿಳಾ ನಿರ್ದೇಶಕರು 2 ಸೇರಿ 9 ಹಾಗೂ ಮುಳಬಾಗಿಲು, ಕೋಲಾರ ತಲಾ ಇಬ್ಬರು ಎನ್​ಡಿಎ ನಿರ್ದೇಶಕರು 4 ಮಂದಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ಗೆ ಬಹುಮತ ದೊರೆತಿದ್ದರೂ ಸಹ ಅಧಿಕಾರಕ್ಕೆ ಬರಲು ಶಾಸಕರಿಬ್ಬರು ಆಕಾಂಗಳಾಗಿದ್ದಾರೆ. ಅದರಲ್ಲೂ ಕೆ.ಎಚ್​.ಮುನಿಯಪ್ಪ ಹಾಗೂ ಟಬಂಧನ್​ ಗುಂಪುಗಳಿದ್ದು, ಯಾರ ಪಾಲಿಗೆ ಅಧಿಕಾರ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸಹಕಾರ ರಂಗದಲ್ಲಿ ಜೆಡಿಎಸ್​ ಒಂದು ಹೆಜ್ಜೆ ಮುಂದೆಯಿತ್ತು, ಆದರೆ ರಾಜಕೀಯವಲಯದಲ್ಲಿ ಬದಲಾದ ಪರಿಸ್ಥಿತಿಯಿಂದ ವರ್ಚಸ್ಸು ಕಳೆದುಕೊಳ್ಳುತ್ತಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ಅಧಿಕಾರಕ್ಕೇರಲು ತುದಿಗಾಲಲ್ಲಿ ನಿಂತಿದೆ. ಜತೆಗೆ ಇಬ್ಬರು ಶಾಸಕರು ಚುನಾವಣೆಗೆ ಸ್ಪರ್ಧೆ ಮಾಡಿರುವುದು ಎಲ್ಲರ ಗಮನ ಸೆಳೆದಂತಾಗಿದೆ.

ಆಡಳಿತ ಪಕ್ಷದ ಶಾಸಕರಾದ ಎಸ್​.ಎನ್​.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ ಅವರು ಚುನಾವಣೆಗೆ ಸ್ಪರ್ಧಿಸಿರುವುದು, ಜೆಡಿಎಸ್​&ಬಿಜೆಪಿಗೂ ಪ್ರತಿಷ್ಠೆಯಾದಂತಾಯಿತು. ಇದನ್ನು ಗಂಭೀರವಾಗಿ ತೆಗೆದುಕೊಂಡ ಸಂಸದ ಎಂ.ಮಲ್ಲೇಶ್​ ಬಾಬು, ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್​, ಜಿ.ಕೆ.ವೆಂಕಟಶಿವಾರೆಡ್ಡಿ, ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​, ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ತಮ್ಮ ಪಕ್ಷದಿಂದ ಬೆಂಬಲಿತರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳಲು ತಳಮಟ್ಟದಿಂದ ಕೆಲಸ ಮಾಡಿದರು, ಆದರೆ ಲಿತಾಂಶ ನಿರಾಸೆಯುಂಟು ಮಾಡಿದೆ.

* ಕಾಂಗ್ರೆಸ್​ಗೆ ಗುಂಪುಗಾರಿಕೆೆ ದಿಗಿಲು

ಒಟ್ಟು ಚುನಾಯಿತ 13 ನಿರ್ದೇಶಕರ ಪೈಕಿ ಕಾಂಗ್ರೆಸ್​ ಬೆಂಬಲಿತ ಶಾಸಕರಾದ ಎಸ್​.ಎನ್​.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಕೆಜಿಎ್​ ಜಯಸಿಂಹ ಕೃಷ್ಣಪ್ಪ, ಚಂಜಿಮಲೆ ರಮೇಶ್​, ಹನುಮೇಶ್​, ಕೆ.ಕೆ.ಮಂಜುನಾಥ್​, ಶ್ರೀನಿವಾಸ್​, ಕಾಂತಮ್ಮ, ಮಹಾಲಕ್ಷಿ$್ಮ ಹಾಗೂ ಮೈತ್ರಿಯಿಂದ ಡಿ.ವಿ.ಹರೀಶ್​, ಚಲುವನಹಳ್ಳಿ ನಾಗರಾಜ್​, ಮುಳಬಾಗಿಲು ಕಾಡೇನಹಳ್ಳಿ ನಾಗರಾಜ್​, ಶಾಮೇಗೌಡ ಆಯ್ಕೆಯಾಗಿದ್ದಾರೆ. ಎಸ್​.ಎನ್​.ನಾರಾಯಣಸ್ವಾಮಿ, ಮಹಾಲಕ್ಷಿ$್ಮ ಅವರು ಸಚಿವ ಕೆ.ಎಚ್​.ಮುನಿಯಪ್ಪ ಅವರ ಬಣದವರಾಗಿದ್ದು, ಎಸ್​.ಎನ್​.ನಾರಾಯಣಸ್ವಾಮಿ ಅಧ್ಯಕ್ಷರಾಗಲು ಪ್ರಬಲ ಅಕಾಂಯಾಗಿದ್ದಾರೆ.

ಉಳಿದವರು ಟಬಂದನ್​ ಗುಂಪಿನವರಾಗಿದ್ದು, ಕೆ.ವೈ.ನಂಜೇಗೌಡ ಅವರು 3ನೇ ಬಾರಿ ಆಯ್ಕೆ ಬಯಸಿದ್ದಾರೆ. ಆದರೆ ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ಭಯ ಇದೆ.

* ಹಳಬರು-ಹೊಸಬರು

ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಸೇರಿ ಕೆ.ಕೆ.ಮಂಜುನಾಥ್​, ಮಹಾಲಕ್ಷಿ$್ಮ, ಚಂಜಿಮಲೆ ರಮೇಶ್​, ಚಲುವನಹಳ್ಳಿ ನಾಗರಾಜ್​, ಶಾಮೇಗೌಡ, ಶ್ರೀನಿವಾಸ್​ ಮೊದಲ ಬಾರಿ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಕೆ.ವೈ.ನಂಜೇಗೌಡ, ಜಯಸಿಂಹಕೃಷ್ಣಪ್ಪ, ಕಾಡೇನಹಳ್ಳಿ ನಾಗರಾಜ್​, ಡಿ.ವಿ.ಹರೀಶ್​, ಕಾಂತಮ್ಮ, ಹನುಮೇಶ್​ ಒಕ್ಕೂಟಕ್ಕೆ ಹಳಬರಾಗಿದ್ದಾರೆ.

* ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ

ಒಕ್ಕೂಟದ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಲಿತಾಂಶ ಘೋಷಣೆಯಾಗುತ್ತಿದ್ದಂತೆ, ಮತಗಟ್ಟೆ ಬಳಿ ಜಮಾಯಿಸಿದ್ದ ಬೆಂಬಲಿತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಸಂಸದ ಎಂ.ಮಲ್ಲೇಶ್​ ಬಾಬು, ಶಾಸಕರಾದ ಸಮೃದ್ಧಿ ಮಂಜುನಾಥ್​, ನಂಜೇಗೌಡ, ಎಸ್​.ಎನ್​.ನಾರಾಯಣಸ್ವಾಮಿ ಸೇರಿ ಗೆದ್ದ ಅಭ್ಯರ್ಥಿಗಳನ್ನು ಬೆಂಬಲಿಗರು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದರು. ಆ ಮೂಲಕ ಜೈಕಾರಗಳನ್ನು ಕೂಗಿದರು.

* 13 ಚುನಾಯಿತ, 5 ಸರ್ಕಾರಿ ಪ್ರತಿನಿಧಿ

ಒಕ್ಕೂಟದ ಆಡಳಿತ ಮಂಡಳಿ ರಚನೆಗೆ ಒಟ್ಟು 18 ನಿರ್ದೇಶಕರ ಸ್ಥಾನಗಳನ್ನು ನಿಗದಿಪಡಿಸಿದ್ದು, ಆ ಪೈಕಿ 13 ಚುನಾಯಿತ ನಿರ್ದೇಶಕರು, ಸರ್ಕಾರದ ನಾಮಿನಿ, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಪ್ರತಿನಿಧಿ, ಪಶು ಸಂಗೋಪನೆ ಇಲಾಖೆ, ಸಹಕಾರ ಸಂಗಳ ನಿಬಂಧಕ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿದ ತಲಾ ಓರ್ವ ನಿರ್ದೇಶಕರ ಸ್ಥಾನ ನಿಗದಿಪಡಿಸಲಾಗಿದೆ. ಚುನಾಯಿತ ನಿರ್ದೇಶಕರ 13 ಮಂದಿ ಪೈಕಿ 7 ಕೊರಂ ಇರಬೇಕು, ಕಾಂಗ್ರೆಸ್​ ಬೆಂಬಲಿತರು 9 ಮಂದಿಯಿದ್ದು, ಇದರ ಜತೆಗೆ ಸರ್ಕಾರದ ಪ್ರತಿನಿಧಿಗಳು ಸೇರಿ 14 ಸಂಖ್ಯಾ ಬಲವಾಗುತ್ತದೆ. ಅದ್ದರಿಂದ ಒಗ್ಗಟ್ಟಾಗಿ ಇದ್ದರೆ ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿಯಲು ಸುಲಭವಾಗುತ್ತದೆ.

* ತಳಮಟ್ಟ ಕೆಲಸಕ್ಕೆ ಸಿಕ್ಕ ಫಲ

ಒಟ್ಟಾರೆ ಅಭ್ಯರ್ಥಿಗಳ ಪೈಕಿ ಕೋಲಾರ ಮತ್ತು ಮುಳಬಾಗಿಲು ತಾಲೂಕು ವ್ಯಾಪ್ತಿಯಿಂದ ಇಬ್ಬರು ಜೆಡಿಎಸ್​&ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಸ್ಥಳಿಯರ ಶಾಸಕರು, ಮುಖಂಡರು ಯಶಸ್ವಿಯಾಗಿದ್ದಾರೆ.

ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್​ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಕಾಡೇನಹಳ್ಳಿ ನಾಗರಾಜ್​ ಮತ್ತು ಶಾಮೇಗೌಡರನ್ನು ಗೆಲ್ಲಿಸಿಕೊಂಡು ಕ್ಷೇತ್ರದಲ್ಲಿ ಪಕ್ಷವು ಬಲಿಷ್ಠವಾಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಅದೇ ರೀತಿ ಕೋಲಾರ ಕ್ಷೇತ್ರದಲ್ಲಿ ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​, ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಸಮ್ಮುಖದಲ್ಲಿ ಚುನಾವಣೆ ನಡೆದಿದ್ದು, ಎನ್​ಡಿಎ ಅಭ್ಯರ್ಥಿಗಳಾದ ಡಿ.ವಿ.ಹರೀಶ್​, ಚಲುವನಹಳ್ಳಿ ನಾಗರಾಜ್​ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆ ಮೂಲಕ ಕಾಂಗ್ರೆಸ್​ಗೆ ತೀವ್ರ ಪೈಪೋಟಿ ನೀಡಿದ್ದಾರೆ.